Job Description: * ವೈದ್ಯಕೀಯ ಸಂಶೋಧನೆಯಿಂದಾಗಿ ರೋಗಪೀಡಿತ ಕಾರ್ನಿಯಾಗಳಿಂದಾಗಿ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನ್‌ನಲ್ಲಿ 20 ಜನರಿಗೆ ದೃಷ್ಟಿಯನ್ನು ಮರಳು ನೀಡಲು ಸಂಶೋಧಕರು ಹಂದಿಯ ಚರ್ಮದಿಂದ ಮಾಡಿದ ಇಂಪ್ಲಾಂಟ್ ಅನ್ನು ಬಳಸಿದ್ದಾರೆ.* ಪ್ರಪಂಚದಾದ್ಯಂತ ಅಂದಾಜು 1.27 ಕೋಟಿ ಜನರು ತಮ್ಮ ಕಾರ್ನಿಯಾಗಳಿಂದ ಕುರುಡರಾಗಿದ್ದಾರೆ.* ಕಾರ್ನಿಯಾ ಕಸಿಯಿಂದಾಗಿ ಕಾರ್ನಿಯಲ್ ಕುರುಡುತನ ಮತ್ತು ಮಂದ ದೃಷ್ಟಿಯಿಂದ ಬಳಲುತ್ತಿರುವವರಿಗೆ ಭರವಸೆ ನೀಡುತ್ತದೆ ಎಂದು ಹೇಳಿದೆ.* ಸ್ವೀಡನ್‌ನ ಲಿಂಕೋಪಿಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನೀಲ್ ಲಗಾಲಿ ಹೇಳಿದ್ದಾರೆ. * ಇದು ದಾನ ಮಾಡಿದ ಕಾರ್ನಿಯಲ್ ಅಂಗಾಂಶದ ಕೊರತೆ ಮತ್ತು ಕಣ್ಣಿನ ಕಾಯಿಲೆಗಳ ಇತರ ಚಿಕಿತ್ಸೆಗಳಿಗೆ ಅನುಕೂಲತೆ ಮಾಡುತ್ತದೆ” ಎಂದು ಅಧ್ಯಯನದ ಹಿಂದಿನ ಸಂಶೋಧಕರಲ್ಲಿ ಒಬ್ಬರಾದ ಲಗಾಲಿ ಹೇಳಿದರು.* ಭಾರತ ಮತ್ತು ಇರಾನ್‌ನಲ್ಲಿ 20 ಜನರಲ್ಲಿ 14 ಜನರಿಗೆ ಮರಳಿ ಯಾವ ಸಮಸ್ಯೆಯು ಕಂಡು ಬಂದಿಲ್ಲ. * ಭಾರತ 8 ಜನ ಮತ್ತು ಇರಾನ್‌ 12 ಜನರಿಗೆ ಎರಡು ವರ್ಷಗಳ ಹಿಂದೆ ಸಂಗ್ರಹಿಸಿಟ್ಟಿದ್ದ ಹಂದಿಯ ಜೈವಿಕ ಕಾರ್ನಿಯಾವನ್ನು ಕಸಿ ಮಾಡಲಾಗಿದೆ.