Job Description: * ಎಂ ಎಚ್ ಕೃಷ್ಣಯ್ಯ ಅವರು 1937 ರ ಜುಲೈ 21 ರಂದು ಮೈಸೂರಿನಲ್ಲಿ ಜನಿಸಿದರು ಇವರ ತಂದೆ ಹುಚ್ಚಯ್ಯ ತಾಯಿ ಕೆಂಪಮ್ಮ* ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಪದವಿಗಳನ್ನು ಪಡೆದ ಇವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. * ಕೃಷ್ಣಯ್ಯನವರ ಕೃತಿಗಳು 30 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.* ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್.ಎಮ್.ಹಡಪದ್, ರೂಪಶಿಲ್ಪಿ ಬಸವಯ್ಯ, ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಸೇರಿದಂತ್ತೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.* ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಇವರು ಮಾಡಿದ್ದಾರೆ * ಇವರಿಗೆ ಉದಯ ಭಾನು ಕಲಾ ಸಂಘವು ತನ್ನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತಂದ ಸುಮಾರು 3000 ಪುಟಗಳ 'ಬೆಂಗಳೂರು ದರ್ಶನ' ಬೃಹತ್ ಸಂಪುಟಗಳ ಸಂಪಾದಕರಾಗಿ ಕೊಡುಗೆ ನೀಡಿದ್ದಾರೆ.* ಇವರು ಕನ್ನಡ ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿ (ಸಿಂಡಿಕೇಟ್), ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. * * ಕೃಷ್ಣಯ್ಯ ನವರಿಗೆ ನೀಡಿ ಗೌರವಿಸಿದ ಪ್ರಶಸ್ತಿಗಳು :- 'ಶೃಂಗಾರ ಲಹರಿ' ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ- 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ- ಕುವೆಂಪು ಪ್ರಶಸ್ತಿ ಮಾಸ್ತಿ ಪ್ರಶಸ್ತಿ- ಹಂಪಿ ವಿಶ್ವವಿದ್ಯಾಲಯವು 'ನಾಡೋಜ' ನೀಡಿ ಗೌರವಿಸಿದೆ