Job Description: * ಕಾಮನ್ ವೆಲ್ತ್ ಕ್ರೀಡಾಕೂಟ 2022 ರ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022 ರಲ್ಲಿ ವೇಟ್ ಲಿಫ್ಟರ್ ವಿಕಾಸ್ ಠಾಕೂರ್ ಅವರು ಬೆಳ್ಳಿ ಪದಕವನ್ನು ಪಡೆದರು.* ಪುರುಷರ 96 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಾಣಿಸಿಕೊಂಡ ವಿಕಾಸ್ ಠಾಕೂರ್ ಒಟ್ಟು 346 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.* ಇನ್ನು ಸಮೋವಾದ ಡಾನ್ ಒಪೊಲಾಗ್ ಚಿನ್ನದ ಪದಕಕ್ಕೆ ಮುತ್ತಿಟ್ಟರು.* ಅಷ್ಟೇ ಅಲ್ಲದೆ ಒಪೊಲಾಗ್ 381 ಕೆಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.* ವಿಕಾಸ್ ಠಾಕೂರ್ಗೆ ಇದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು 2014 ರ ಗೇಮ್ಸ್‌ನಲ್ಲಿ 86 ಕೆಜಿಯಲ್ಲಿ ಬೆಳ್ಳಿ ಗೆದ್ದರೆ, ಗೋಲ್ಡ್ ಕೋಸ್ಟ್ 2018 ರಲ್ಲಿ 94 ಕೆಜಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.* ಈ ಬಾರಿಯ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಇದು ಎಂಟನೇ ಪದಕವಾಗಿದ್ದು, ಮೂರನೇ ಬೆಳ್ಳಿ ಪದಕ ಭಾರತದ ಖಾತೆಗೆ ಸೇರಿದೆ. ಇದಲ್ಲದೇ ಭಾರತ 3 ಚಿನ್ನ ಹಾಗೂ ಎರಡು ಕಂಚಿನ ಪದಕಗಳನ್ನು ಕೂಡ ಗೆದ್ದಿದೆ.