Job Description: * ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಮಹಿಳೆಯರ 71 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಪ್ಪರ್ ಹರ್ಪಿಂದರ್ ಕೌರ್ ಒಟ್ಟು 212 KG ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.* ಈ ಮೂಲಕ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್ ಲಿಫ್ಟಿಂಗ್‌ನಲ್ಲಿ ಇದು ಭಾರತಕ್ಕೆ 7 ನೇ ಪದಕವಾಗಿದೆ. * 2 ನೇ ಸುತ್ತಿನಲ್ಲಿ 90 ಕೆಜಿ ಹಾಗೂ 3 ನೇ ಸುತ್ತಿನಲ್ಲಿ ಯಶಸ್ವಿಯಾಗಿ 93 ಕೆಜೆ ಭಾರವನ್ನು ಎತ್ತಿದರು.* ನಂತರ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ 113 ಕೆ.ಜಿ ಎತ್ತುವಲ್ಲಿ ಯಶಸ್ವಿಯಾದರು.* 2 ನೇ ಸುತ್ತಿನಲ್ಲಿ 116 ಕೆಜಿ ಹಾಗೂ 3ನೇ ಸುತ್ತಿನಲ್ಲಿ 119 KGಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.