Job Description: * ಆದಾಯ ತೆರಿಗೆ ದಿನದ 163 ನೇ ವಾರ್ಷಿಕೋತ್ಸವವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ಭಾರತದಾದ್ಯಂತ ಎಲ್ಲಾ ಕ್ಷೇತ್ರ ಕಚೇರಿಗಳು ಜುಲೈ 25 ರಂದು ಆಚರಿಸಿದವು. * ಆಚರಣೆಯ ಭಾಗವಾಗಿ, ಕ್ಷೇತ್ರ ಘಟಕಗಳು ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ನಡೆಸಿದವು.* ರಾಷ್ಟ್ರಕ್ಕೆ ಅವರ ಕೊಡುಗೆಯನ್ನು ಗುರುತಿಸುವ ತೆರಿಗೆದಾರರಿಗೆ ಔಟ್ರೀಚ್‌(ಜನ ಸಂಪರ್ಕ) ಕಾರ್ಯಕ್ರಮಗಳು, ತೆರಿಗೆದಾರರಿಗೆ ಸನ್ಮಾನ ಕಾರ್ಯಕ್ರಮಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ಗಳಂತಹ ಸಂಪನ್ಮೂಲಗಳನ್ನು ಮೇಲ್ದರ್ಜೆಗೇರಿಸಲು ಕೊಡುಗೆ ನೀಡುವುದು, ಇಲಾಖಾ ನೌಕರರ ಕೊಡುಗೆಗಳಿಂದ ಅನಾಥಾಶ್ರಮಗಳು / ವೃದ್ಧಾಶ್ರಮಗಳಿಗೆ ಸ್ವಯಂಪ್ರೇರಿತ ಟೋಕನ್‌ ದೇಣಿಗೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್‌-ಲಸಿಕಾ ಶಿಬಿರಗಳನ್ನು ಆಯೋಜಿಸುವುದು ಮುಂತಾದ ಕಾರ್ಯಕ್ರಮಗಳನ್ನು ಕ್ಷೇತ್ರ ಘಟಕಗಳು ನಡೆಸಿದವು. * ಗಿಡಗಳನ್ನು ನೆಡುವುದು ಮತ್ತು ಸ್ವಚ್ಛತಾ ಅಭಿಯಾನಗಳು ಕೂಡ ಇವುಗಳಲ್ಲಿ ಸೇರಿವೆ. ಇದಲ್ಲದೆ, ಹಾಫ್‌ ಮ್ಯಾರಥಾನ್‌, ಸೈಕ್ಲೋಥಾನ್‌, ಮಕ್ಕಳು ಮತ್ತು ಯುವ ವಯಸ್ಕರಿಗೆ ತೆರಿಗೆ ಸಾಕ್ಷರತೆಯ ಬೋರ್ಡ್‌ ಆಟಗಳ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಂಗ್ಯಚಿತ್ರ ಪ್ರದರ್ಶನಗಳ ಉದ್ಘಾಟನೆ ಮತ್ತು ಅಂತಹ ಇತರ ಕಾರ್ಯಕ್ರಮಗಳು ಸಹ ನಡೆದವು.* ಹಣಕಾಸು ವರ್ಷದಲ್ಲಿ 14 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಆದಾಯ ಸಂಗ್ರಹವನ್ನು ಸಾಧಿಸಿದ್ದಕ್ಕಾಗಿ ಹಣಕಾಸು ಸಚಿವರು ಇಲಾಖೆಯನ್ನು ಶ್ಲಾಘಿಸಿದರು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲೂ ಇಲಾಖೆ ಈ ವೇಗವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಆಶಿಸಿದರು.* ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್‌ ಕಿಶನ್‌ ರಾವ್‌ ಕರಾಡ್‌ ಅವರು, ತಮ್ಮ ಸಂದೇಶದಲ್ಲಿ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಆದಾಯ ತೆರಿಗೆ ಇಲಾಖೆ ಪ್ರಮುಖ ಪಾತ್ರ ವಹಿಸಿದೆ ಎಂದು ಗಮನಿಸಿದ್ದಾರೆ.* ಸಿಬಿಡಿಟಿಯ ಅಧ್ಯಕ್ಷರಾದ ಶ್ರೀ ನಿತಿನ್‌ ಗುಪ್ತಾ ಅವರು, ತಮ್ಮ ಸಂದೇಶದಲ್ಲಿ 2021-22 ನೇ ಹಣಕಾಸು ವರ್ಷದಲ್ಲಿ 14.09 ಲಕ್ಷ ಕೋಟಿ ರೂ.ಗಳ ಅತಿ ಹೆಚ್ಚು ನಿವ್ವಳ ಸಂಗ್ರಹವನ್ನು ದಾಖಲಿಸಿದ್ದಕ್ಕಾಗಿ ಇಲಾಖೆಯನ್ನು ಶ್ಲಾಘಿಸುತ್ತಾ, ಇಲಾಖಾ ಸಿಬ್ಬಂದಿಗೆ ಸಾಧನೆಗಳು, ಗೌರವಗಳನ್ನು ನೆನೆಯುತ್ತಾ, ಸುಮ್ಮನಾಗಿ ಬಿಡಬೇಡಿ ಎನ್ನುತ್ತಾ ಎಚ್ಚರಿಕೆಯನ್ನು ಸಹ ನೀಡಿದರು.* ಆದಾಯ ತೆರಿಗೆ ದಿನದ ಆಚರಣೆಯು ಇಲಾಖಾ ಸಿಬ್ಬಂದಿಗೆ ರಾಷ್ಟ್ರದ ಸೇವೆಗಾಗಿ ಇಲ್ಲಿಯವರೆಗೆ ನಡೆದ ಪ್ರಯಾಣವನ್ನು ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಒಂದು ಸಂದರ್ಭವಾಗಿ ಕಾರ್ಯನಿರ್ವಹಿಸಿತು.