Job Description: * ಸಿಂಗಾಪುರ ಓಪನ್ ಫೈನಲ್‌ನಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ಪಿವಿ ಸಿಂಧು ಅವರು ಚೀನಾದ ವಾಂಗ್ ಝಿ ಯಿ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.* ಸೈನಾ ನೆಹ್ವಾಲ್ (2010) ಮಹಿಳಾ ವಿಭಾಗದಲ್ಲಿ ಹಾಗೂ ಬಿ ಸಾಯಿ ಪ್ರಣೀತ್ (2017) ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.* 2022ರಲ್ಲಿ ಸಿಂಧು ಅವರ ಮೊದಲ ಸೂಪರ್ 500 ಪ್ರಶಸ್ತಿಯಾಗಿದೆ. ಈ ಹಿಂದೆ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್ - ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು. ಎರಡು ಒಲಂಪಿಕ್ ಪದಕಗಳ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್‌ನಿಂದ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಹೊಂದಿರುವ ಅವರ ಇದೀಗ ಸಿಂಗಾಪುರ್ ಓಪನ್ ಚಿನ್ನದ ಪಾದಜವನ್ನು ಗೆದ್ದುಕೊಂಡಿದ್ದಾರೆ. ಇದು ಸಿಂಧು ಅವರ ವೃತ್ತಿಜೀವನದ 18ನೇ ಪ್ರಶಸ್ತಿಯಾಗಿದೆ.* ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಸಿಂಧು ಅತ್ಯುತ್ತಮ ಪ್ರದರ್ಶನ ನೀಡಿದರು. ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು. ಆದರೂ 2 ನೇ ಸೆಟ್ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್ನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಕಲೆಹಾಕಿ ಒತ್ತಡಕ್ಕೆ ಸಿಲುಕಿಸಿದ್ದರು. ಪರಿಣಾಮ ಎರಡನೇ ಸೆಟ್ ಅನ್ನು ಪಿ ವಿ ಸಿಂಧು 11-21 ಅಂತರದಿಂದ ಸೋತರು.*ಮೊದಲ 5 ಪಾಯಿಂಟ್ವರೆಗೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಸಿಂಧು ಸ್ಮ್ಯಾಶ್ ಮೂಲಕ ವಾಂಗ್ ಝಿ ಯಿಯನ್ನು ಇಕ್ಕಟ್ಟಿಗೆ ಸಿಲುಕಿದರು. ಪರಿಣಾಮ ಏಕಾಏಕಿ ಸಿಂಧು ಅವರ ಪಾಯಿಂಟ್ 11 ಕ್ಕೇರಿದರೆ, ಝಿ 6 ರಲ್ಲೇ ಉಳಿದರು. ಆದರೆ ಈ ಹಂತದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಅಲ್ಲದೆ ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು.* ಯಶಸ್ವಿಯಾದ ಸಿಂಧು ಮತ್ತೊಮ್ಮೆ ತಮ್ಮ ಬ್ಯಾಕ್ ಜಂಪ್ ಸ್ಯಾಶ್ ಮೂಲಕ ವಾಂಗ್ ಝಿ ವಿರುದ್ದ ಮೇಲುಗೈ ಹೊಂದಿದರು. ಅಂತಿಮವಾಗಿ 21-15 ರ ಅಂತರದಿಂದ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.* ಸೆಮಿಫೈನಲ್‌ನಲ್ಲಿ ಜಪಾನ್‌ನ ಸೈನಾ ಕವಾಕಮಿ ಅವರನ್ನು ಕೇವಲ 31 ನಿಮಿಷಗಳಲ್ಲಿ 21-15 ಮತ್ತು 21-7 ರ ಅಂತರದಿಂದ ಸೋಲಿಸಿದರು. ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು ಮೊದಲ ಗೇಮ್‌ನಲ್ಲಿ 11-8ರಲ್ಲಿ ಮುನ್ನಡೆ ಕಾಯ್ದುಕೊಂಡರು.* ಜಪಾನಿನ ಆಟಗಾರ್ತಿ ಸರ್ವಿಸ್ ಮತ್ತು ಕ್ರಾಸ್ ಕೋರ್ಟ್‌ನ ಪ್ರಬಲ ಆಟದಿಂದಾಗಿ ಸತತ ಮೂರು ಪಾಯಿಂಟ್‌ಗಳನ್ನು ಗಳಿಸಿ ಸಿಂಧುಗೆ ಸರಿಸಮಾನವಾಗಿ ತಲುಪಿದರು. ಇದಾದ ಬಳಿಕ ಇಬ್ಬರ ನಡುವೆ ತಲಾ ಒಂದೊಂದು ಅಂಕಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಆದರೆ ಸಿಂಧು ತಮ್ಮ ಅನುಭವದ ಲಾಭ ಪಡೆದು ಮೊದಲ ಗೇಮ್‌ನಲ್ಲಿ 21-15 ರಿಂದ ಮುನ್ನಡೆ ಸಾಧಿಸಿದರು.* ಎರಡನೇ ಗೇಮ್‌ನಲ್ಲೂ ಇದೇ ಟ್ರೆಂಡ್‌ ಮುಂದುವರಿಸಿದ ಸಿಂಧು ಜಪಾನ್‌ ಆಟಗಾರ್ತಿ ಕವಾಕಮಿಗೆ ಕಂಬ್ಯಾಕ್ ಮಾಡಲು ಯಾವುದೇ ಅವಕಾಶ ನೀಡಲಿಲ್ಲ. ಎರಡನೇ ಗೇಮ್‌ನಲ್ಲಿ ಅವರು ಒಂದು ಹಂತದಲ್ಲಿ 5-0 ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ 21-7 ಗೇಮ್‌ಗಳನ್ನು ಗೆದ್ದು ಸಿಂಗಾಪುರ ಓಪನ್‌ನ ಫೈನಲ್‌ಗೆ ಪ್ರವೇಶಿಸಿದ್ದರು.* ಹಾಗೆಯೇ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ 19ನೇ ಶ್ರೇಯಾಂಕದ ಹಾನ್ ಯು ಅವರನ್ನು 17-21, 21-11 ಮತ್ತು 21-19 ಸೆಟ್‌ಗಳಿಂದ ಸೋಲಿಸಿದ್ದರು. ಈ ಪಂದ್ಯ 1 ಗಂಟೆ 2 ನಿಮಿಷಗಳ ಕಾಲ ನಡೆಯಿತು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ