Job Description: * ದಕ್ಷಿಣ ಕೊರಿಯಾದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ ಅವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.* ತೋಮರರವರು ಶನಿವಾರ ನಡೆದ ಟೂರ್ನಿಯ ಪುರುಷರ 50 ಮೀಟರ್ಸ್ ರೈಫಲ್ ತ್ರೀ ಪೊಸಿಷನ್ಸ್ ವಿಭಾಗದ ಫೈನಲ್‌ನಲ್ಲಿ 16-12 ರಿಂದ ಯೂತ್ ಒಲಂಪಿಕ್ ಚಾಂಪಿಯನ್ ಶಿಪ್ ನಲ್ಲಿ ಹಂಗರಿಯ ಜಲಾನ್ ಪೆಕ್ಲ್ ರ್ ಅವರನ್ನು ಸೋಲಿಸಿದರು ಹಾಗು ಹಂಗರಿಯ ಇಸ್ತವಾನ್ ಪೆನ್ ರವರು ಇದರಲ್ಲಿ ಕಂಚನ್ನು ತಮ್ಮದಾಗಿಸಿಕೊಂಡರು. * ಸದ್ಯಕ್ಕೆ ಭಾರತವು 4 ಚಿನ್ನ, 4 ಬೆಳ್ಳಿ, ಮತ್ತು ಒಂದು ಕಂಚನ್ನು ಪಡೆದು ಈ ಬಾರಿಯ ವಿಶ್ವಕಪ್‌ನಲ್ಲಿ ನಾಲ್ಕನೇ ಚಿನ್ನದ ಪದಕವನ್ನು ಜಯಿಸಿದೆ ಹಾಗು ಇದರಿಂದ ಪದಕ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. * ಭಾರತದ ಇನ್ನೊಬ್ಬ ಶೂಟರ್ ಚೈನ್ ಸಿಂಗ್ 50 ಮೀಟರ್ಸ್ ರೈಫಲ್ ತ್ರೀ ಪೊಸಿಷನ್ಸ್ ನ ಫೈನಲ್ ನಲ್ಲಿ ಏಳನೇ ಸ್ಥಾನವನ್ನು ಗಳಿಸಿದರು.* ಈ ಚಾಂಪಿಯನ್ ಶಿಪ್ ನಲ್ಲಿ ಮನು ಭಾಕರ್ ಗೆ ನಿರಾಸೆಯನ್ನು ಅನುಭವಿಸಿದರು.* ಮಹಿಳೆಯರ 25 ಮೀಟರ್ಸ್ ವಿಭಾಗದ 2019 ರ ವಿಶ್ವ ಚಾಂಪಿಯನ್ ಶಿಪ್ನ ಶೂಟರ್ ಗಳು ಫೈನಲ್ಸ್ ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದರು.* ಮಹಿಳೆಯರ 50 ಮೀ ರೈಫಲ್ ತ್ರೀ ಪೊಸಿಷನ್ಸ್ ನಲ್ಲಿ ಅಂಜುಮ್ ಮೌದ್ಗೀಲ್ ರವರು ಫೈನಲ್ ತಲುಪಿದ್ದಾರೆ.