Job Description: * ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಏನ್ ಡಿಎ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿಯಲ್ಲಿದ್ದಾರೆ ಇದನ್ನು ಶನಿವಾರ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.* ಜಗದೀಪ್ ಧನಕರ್ ರವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಧನಕರ್ ರೈತ ಪುತ್ರ ಹಾಗು ಜನಮೆಚ್ಚಿದ ರಾಜ್ಯಪಾಲರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.* ಜುಲೈ 19 ಈ ಹುದ್ದೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಹಾಗು ಚುನಾವಣೆಯು ಆಗಸ್ಟ್ 6 ರಂದು ನಿಗದಿಯಾಗಿದೆ.* ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಜಗದೀಪ್ ಧನಕರ್ ರವರು 2019 ರ ಜುಲೈ ನಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.* ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೇಟಿ ಮಾಡಿ ಇದಕ್ಕೂ ಮುನ್ನ ಜಗದೀಪ್ ದನಕರ್ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.* ಜಗದೀಪ್ ಧನಕರ್ ಅವರು ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು ಹಾಗು ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ ಹಾಗು ರಾಜಸ್ತಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.