Job Description: * ಅಮೇರಿಕ ಸಂಸತ್ತಿನ ಕೆಳಮನೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿರುವ ಭಾರತಕ್ಕೆ ಕಠಿಣ ಕಾಯ್ದೆ ಸಿಎಎಎಸ್ಎ ಅಡಿ ನಿರ್ಬಂಧ ಹೇರುವುದರಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ.* ಈ ತಿದ್ದುಪಡಿ ಮಸೂದೆಯನ್ನು ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ ಅವರು ಮಂಡಿಸಿದರು ಇದನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.* ಭಾರತಕ್ಕೆ ಎಸ್ -400 ಕ್ಷಿಪಣಿ ವ್ಯವಸ್ಥೆಯು ಚೀನಾದಂತಹ ಆಕ್ರಮಣಶೀಲ ರಾಷ್ಟ್ರವನ್ನು ಎದುರಿಸಲು ಸಹಾಯವಾಗಲಿದೆ.* ಅದಕ್ಕಾಗಿ ಸಿಎಎಟಿಎಸ್‌ಎ ಇಂದ (ಕಾಟ್ಸಾ) ಭಾರತಕ್ಕೆ ವಿನಾಯಿತಿ ನೀಡಲು ಜೋ ಬೈಡನ್ ಆಡಳಿತಕ್ಕೆ ಈ ತಿದ್ದುಪಡಿ ಅನುವು ಮಾಡಿಕೊಡುತ್ತದೆ.