Job Description: * ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಂ ಸಿಂಘೆ ಯವರು ಪ್ರಮಾಣ ವಚನ ಸ್ವೀಕರಿಸಿದರು ಹಾಗು ಜುಲೈ 20 ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.* ಸಂಸತ್‌ ಸಭೆಯನ್ನು ಕರೆಯಲಾಗಿತ್ತು ಏಕೆಂದರೆ ಅಧ್ಯಕ್ಷ ಗೊಟಬಯ ರಾಜಪಕ್ಸ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು.* ಸ್ಪೀಕರ್ ಮಹಿಂದ ಯಾಪಾ ಅಬೆವರ್ದನ ಅವರು ಜುಲೈ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ ಹಾಗೆ ಇವರು 225 ಸಂಸದರು 1978 ರ ನಂತರ ಮೊದಲ ಬಾರಿಗೆ ಅಧ್ಯಕ್ಷರನ್ನು ಜುಲೈ 20 ರಂದು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. * ಈಗ ಆಯ್ಕೆ ಆಗಲಿರುವ ಅಧ್ಯಕ್ಷರು ಗೊಟಬಯ ರಾಜಪಕ್ಸ್ ಅವರ ಉಳಿದ ಅಧಿಕಾರದ ಅವಧಿಯವರೆಗೆ ಅಂದರೆ ನವೆಂಬರ್ 2024 ರವರೆಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.* ಅಧ್ಯಕ್ಷ ಸ್ಥಾನಕ್ಕೆ ರಾನಿಲ್‌ ವಿಕ್ರಂ ಸಿಂಘೆ,ಸಜಿತ್ ಪ್ರೇಮದಾಸ,ಡಲ್ಲಾಸ್ ಅಲಹಪ್ಪೆರುಮಾ ಮತ್ತು ಫೀಲ್ಡ್ ಮಾರ್ಷಲ್ ಶರತ್ ಫೋನ್ಸೆಕಾ ಇವರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ.* ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷವು ಅಧ್ಯಕ್ಷರ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಂ ಸಿಂಘೆ ಅವರಿಗೆ ಬೆಂಬಲ ನೀಡಲು ಆಡಳಿತಾರೂಢ ಶ್ರೀ ಲಂಕಾದ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷ ನಿರ್ಧರಿಸಿದೆ.* ಎಸ್‌ಎಲ್‌ಪಿಪಿ ಪ್ರಧಾನ ಕಾರ್ಯದರ್ಶಿ ಸಾಗರ್ ಕರಿಯವಸಂ ಅವರು ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ರಾನಿಲ್ ವಿಕ್ರಂ ಸಿಂಘೆ ಅವರಿಗೆ ನಮ್ಮ ಬೆಂಬಲ ಎಂದು ಹೇಳಿದ್ದಾರೆ.* ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿವುದು ನನ್ನ ಆದ್ಯತೆ ಎಂದು ಅಧಿಕಾರ ಸ್ವೀಕರಿಸಿದ ನಂತರ ಸಂಸತ್ ಅನ್ನು ಉದ್ದೇಶಿಸಿ ರಾನಿಲ್ ಅವರು ಮಾತನಾಡಿದರು.* ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಸಶಸ್ತ್ರ ಪಡೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಏಕೆಂದರೆ ನಾನು ಪ್ರತಿಭಟಿಸುವವರ ಪರ ಪ್ರತಿಭಟನಾಕರಾರು ಹಾಗು ಗಲಭೆ ಕೋರರ ನಡುವೆ ವ್ಯತ್ಯಾಸ ವಿದೇ ಅದರಿಂದ ಈ ಅಧಿಕಾರ ನೀಡಲಾಗಿದೆ ಎಂದರು.* ರಾನಿಲ್ ಅವರು ಹೆಚ್ಚಿನ ಅಧಿಕಾರ ನೀಡುವ ಸಂವಿಧಾನದ 19 ನೇ ತಿದ್ದುಪಡಿಯನ್ನು ಪರಾಮರ್ಶಿಸುವುದು ಮೊದಲ ಆದ್ಯತೆ ಆಗಿದೆ ಎಂದರು ಈ ಕುರಿತು ಕರಡು ಮಸೂದೆ ಯನ್ನು ಶೀಘ್ರವೇ ಸದನದಲ್ಲಿ ಮಂಡಿಸಲಾಗುವುದು ಎಂದರು ಹಾಗು ವ್ಯಕ್ತಿಗಳನ್ನು ರಕ್ಷಿಸುವ ಬದಲಾಗಿ ದೇಶವನ್ನು ರಕ್ಷಿಸಬೇಕಿದೆ ಎಂದರು.* ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ರಾವಿಲ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.* ಗೊಟಬಯ ಅವರು ಇ-ಮೇಲ್ ಮೂಲಕ ಕಳುಹಿಸಿರುವ ರಾಜಿನಾಮೆಯನ್ನು ಅಂಗೀಕರಿಸಿದ್ದಾಗಿ ಸ್ಪೀಕರ್ ಶುಕ್ರವಾರ ಹೇಳಿದ್ದಾರೆ.