Job Description: * ಭಾರತ ತಂಡವನ್ನು ಇದೇ ತಿಂಗಳು ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 215 ಅಥ್ಲಿಟ್ ಗಳನ್ನೂ ಪ್ರಕಟಿಸಿದ್ದಾರೆ.* ಬರ್ಮಿಂಗ್‌ಹ್ಯಾ ಮ್‌ನಲ್ಲಿ ಜುಲೈ 28 ರಿಂದ ಕೂಟ ಆರಂಭವಾಗಲಿದೆ.* ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ ಪ್ರಕಟಿಸಿರುವ ತಂಡದಲ್ಲಿ ಪುರುಷರು 108 ಮತ್ತು ಮಹಿಳೆಯರು 107 ಸ್ಥಾನ ಪಡೆದಿದ್ದಾರೆ ಹಾಗು ಅಧಿಕಾರಿಗಳು 72 ಮತ್ತು 26 ಹೆಚ್ಚುವರಿ ಅಧಿಕಾರಿಗಳು ಮೂವರು ವ್ಯವಸ್ಥಾಪಕರು ಮತ್ತು ಒಂಬತ್ತು ಸಿಬ್ಬಂದಿ ಕೂಡ ಇದ್ದಾರೆ.* ಭಾರತ ತಂಡವು ಒಟ್ಟು 16 ಕ್ರೀಡಾ ವಿಭಾಗಗಳಲ್ಲಿ ಸ್ಪರ್ದಿಸಲಿದೆ ತಲಾ 36 ಅಥ್ಲಿಟ್ ಗಳು ಅಥ್ಲೆಟಿಕ್ಸ್ ಮತ್ತು ಹಾಕಿ ವಿಭಾಗಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗು ಈ ಕೂಟ ದಲ್ಲಿ ಮಹಿಳಾ ಕ್ರಿಕೆಟ್ ಕೂಡ ನಡೆಯಲಿದೆ.* ಈಜು , ಬ್ಯಾಡ್ಮಿಂಟನ್ , ಟೇಬಲ್ ಟೆನಿಸ್ ,ಬಾಕ್ಸಿಂಗ್ ,ಸೈಕ್ಲಿಂಗ್,ಜಿಮ್ಯಾಸ್ಟಿಕ್,ಟ್ರಯತ್ಲ್ಯಾನ್ ,ವೆಟ್ ಲಿಫ್ಟಿಂಗ್,ಲಾನ್ ಬಾಲ್ಸ್ ಹಾಗು ಇತರ ಕ್ರೀಡೆಗಳ ಅಥ್ಲಿಟ್ ಗಳು ಇದ್ದಾರೆ.