Job Description: * ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.* ಸಚಿವ ಜೈಶಂಕರ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್ ಎ ಸಿ ) ಸಂಘರ್ಷ ಪೀಡಿತ ಸ್ಥಳಗಳಿಂದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕ್ರಿಯೆಯನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕು ಎಂದು ವಿವರಿಸಿದ್ದಾರೆ.* ಈ ವಿಷಯವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ರವರು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ- 20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗೂ ಮುನ್ನ ನಡೆದ ಮಾತುಕತೆ ವೇಳೆ ಪ್ರಸ್ತಾಪಿಸಿದರು.* ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಾಗ ಮಾತ್ರ ಗಡಿಯಲ್ಲಿ ಶಾಂತಿ ಹಾಗು ಸ್ಥಿತರೇ ನೆಲೆಗೊಳ್ಳಲು ಸಾಧ್ಯ ಎಂಬುವುದನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ರವರು ಪುನರ್ ಉಚ್ಛರಿಸಿದರು ಎಂದು ತಿಳಿಸಿದೆ.* ಭಾರತದ ವಿದ್ಯಾರ್ಥಿಗಳು ಮತ್ತೆ ಚೀನಾ ಗೆ ಮರಳುವುದು ಮತ್ತು ಉಭಯ ದೇಶಗಳ ನಡುವೆ ವಿಮಾನ ಸಂಚಾರವನ್ನು ಪುನಾರಂಭಿಸುವುದು ಹಾಗು ಇತರ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಯಿತು.* ಉಭಯ ನಾಯಕರು ಜಾಗತಿಕ ವಿದ್ಯಮಾನಗಳು ಹಾಗೂ ಅವುಗಳಿಂದ ಜಿ -20 ಕಾರ್ಯದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚಿಸಿದರು.