Job Description: * ಶಾಲೆ ಮತ್ತು ಅಂಗನವಾಡಿಗಳಿಂದ ರಾಜ್ಯದಲ್ಲಿ 14 ವರ್ಷದ ಒಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಹೊರಗುಳಿದಿದ್ದಾರೆ ಹಾಗು ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಮತ್ತು ಹೈಕೋರ್ಟ್‌ಗೆ ಈ ಕುರಿತ ವರದಿಯನ್ನು ಸಲ್ಲಿಸಲಾಗಿದೆ.* ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಹೊರಗುಳಿದ ಶಾಲೆಯಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2013 ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿತು.* ಸಮೀಕ್ಷಾ ವರದಿ ಯನ್ನು ಪ್ರಕರಣದ ಕ್ಯೂರಿಯಾಗಿರುವ ( ಕೋರ್ಟ್‌ಗೆ ಸಹಕರಿಸುವ ವಕೀಲರು ) ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು ನ್ಯಾಯಪೀಠಕ್ಕೆ ನೀಡಿದರು.* ಈ ವರದಿ ಶಾಲೆಯಿಂದ ಹೊರಗುಳಿದ 18 ವರ್ಷದೊಳಗಿನ ಮಕ್ಕಳ ಪತ್ತೆಗೆ ನಗರಾಭಿವೃದ್ಧಿ ಇಲಾಖೆ , ಪೌರಾಡಳಿತ ನಿರ್ದೇಶನಾಲಯ ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪ್ರಾಧಿಕಾರಗಳು ನಡೆಸಿರುವ ಮನೆ-ಮನೆ ಸಮೀಕ್ಷೆಯ ವಸ್ತು ಸ್ಥಿತಿ ಅಂಶಗಳನ್ನು ಒಳಗೊಂಡಿದೆ.* 16 ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಹಾಗು ಅಂಗನವಾಡಿಗಳಿಂದ ಹೊರಗುಳಿದ 3 ರಿಂದ 6 ವರ್ಷದ ಮಕ್ಕಳನ್ನು ವಾಪಸ್ಸು ಕರೆತರಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು 16 ರಂದು ಸಭೆಯ ಮೂಲಕ ತಿಳಿಯಬಹುದಾಗಿದೆ ಇದರಿಂದ ವಿಚಾರಣೆಯನ್ನು ಇದೆ 19 ಕ್ಕೆ ಮುಂದೂಡಲಾಗಿದೆ.* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರು 'ಮಕ್ಕಳು ಶಾಲೆಗೆ ಬರೋದು ಕಲಿಯುವುದಕ್ಕೆ ಹೊರತು, ಶೂ , ಸಾಕ್ಸ್ ಹಾಕಿಕೊಳ್ಳಲು ಅಲ್ಲ 'ಎಂದು ಸಚಿವರು ತಿಳಿಸಿದರು. * ಶಾಲೆಯ ಮಕ್ಕಳಿಗೆ ಇನ್ನು ಶೂ , ಸಾಕ್ಸ್ ಬಂದಿಲ್ಲವೆಂದು ವಿರೋಧ ಪಕ್ಸದವರು ಟೀಕಿಸುತ್ತಿದ್ದರು ಇದರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ವರ್ಷವೇ ಮಕ್ಕಳಿಗೆ ಶೂ , ಸಾಕ್ಸ್ ಮತ್ತು ಸೈಕಲ್ ನೀಡಲಾಗುವುದು ಎಂದು ತಿಳಿಸಿದರು.