Job Description: * ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ , ಖ್ಯಾತ ಚಿತ್ರ ಸಾಹಿತಿ ವಿಜಯೇಂದ್ರ ಪ್ರಸಾದ್‌, ಓಟದ ರಾಣಿ ಮಾಜಿ ಅಥ್ಲಿಟ್ ಪಿ ಟಿ ಉಷಾ ಹಾಗೂ ಸಂಗೀತ ಮಾಂತ್ರಿಕ ಇಳಯರಾಜ ಅವರನ್ನು ಬುಧವಾರ ನಾಮನಿರ್ದೇಶನ ಮಾಡಲಾಗಿದೆ ಖಾಲಿ ಉಳಿದಿದ್ದ ನಾಮನಿರ್ದೇಶಿತ ಸದಸ್ಯರ ವಿಭಾಗದಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ.* ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ನಾಲ್ವರು ಸಾಧಕರನ್ನು ಅಭಿನಂದಿಸಿದ್ದಾರೆ ಹಾಗು ಇವರೊಂದಿಗೆ ಕಾಣಿಸಿಕೊಂಡ ಅಪರೂಪದ ಚಿತ್ರಗಳನ್ನು ಟ್ವಿಟ್ ಮಾಡಿದ್ದಾರೆ.* ವಿರೇಂದ್ರ್ ಹೆಗ್ಗಡೆ ರವರು ಸಮುದಾಯಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ ಎಂದು ಟ್ವಿಟ್ ಮೂಲಕ ಕನ್ನಡದಲ್ಲಿ ಬರೆದುಕೊಂಡಿದ್ದಾರೆ ಹಾಗು ಧರ್ಮಸ್ಥಳ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗುವ ಅವಕಾಶ ಒದಗಿತು ಎಂದು ಬರೆದುಕೊಂಡಿದ್ದಾರೆ.* ಕ್ರೀಡಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ದೇಶಕ್ಕೆ ಸಾಕಷ್ಟು ಪ್ರತಿಭೆಯನ್ನು ಪರಿಚಯಿಸಿದ್ದಾರೆ ಅವರ ಕೊಡುಗೆ ಅಪಾರವಾದದ್ದು ಎಂದು ಪ್ರಧಾನಿ ಅವರು ಮಾಜಿ ಅಥ್ಲಿಟ್ ಪಿ ಟಿ ಉಷಾ ರವರ ಬಗ್ಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.* ಸೃಜನಶೀಲ ಪ್ರತಿಭೆ, ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ, ಹಲವು ವರ್ಷಗಳಿಂದ ಸಂಗೀತಕ್ಕೆ ಜೀವ ತುಂಬಿದ್ದಾರೆ ಅವರ ಜೀವನವು ಸ್ಫೂರ್ತಿದಾಯಕವಾಗಿದೆ ಎಂದು ಸಂಗೀತ ಮಾಂತ್ರಿಕ ಇಳಿಯರಾಜರವರ ಬಗ್ಗೆ ಪ್ರಧಾನಿ ಟ್ವೀಟ್ ಮೂಲಕ ಅಭಿನಂದಿಸಿದರು.