Job Description: * ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ 2022 ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ, ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್( ಮೆನ್ ಸ್ಟ್ರುವಲ್ ಕಪ್ ) ವಿತರಿಸುವ 'ಮೈತ್ರಿ ಮುಟ್ಟಿನ ಕಪ್ ' ಯೋಜನೆಗೆ ಚಾಲನೆ ನೀಡಲಾಯಿತು.* ಮುಟ್ಟಿನ ಕಪ್ ವಿತರಿಸಲು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ , ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ , ಯೋಜನೆಯ ರಾಯಭಾರಿಗಳಾದ ಚಿತ್ರ ನಟಿ ಅಮೃತ ಅಯ್ಯಂಗಾರ್ ಹಾಗು ಕ್ರಿಕೆಟ್ ಪಟು ವೇದ ಕೃಷ್ಣಮೂರ್ತಿ ಅವರು ಹೆಣ್ಣು ಮಕ್ಕಳಿಗೆ ವಿತರಿಸಿದರು.* ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ಡಾ.ಕೆ.ಸುಧಾಕರ್ ರವರು ಬಿಳಿಗಿರಿರಂಗನಬೆಟ್ಟದಲ್ಲಿ ಮಾತನಾಡಿದರು.* ' ಮಾತೃ ಹೃದಯದ ಬಿಜೆಪಿ ಸರ್ಕಾರವು ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ತಂದೆ ತಾಯಿಯರಂತೆ ಯೋಚಿಸಿ ಜಾರಿಗೊಳಿಸಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್ ಗಳನ್ನೂ ಆರಂಭಿಸಲಾಗುವದು ಎಂದು ಹೇಳಿದರು.* ಸಚಿವ ಸುಧಾಕರ್ ರವರು ಋತು ಚಕ್ರದ ಅವಧಿಯಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವನ್ನು ಅರ್ಥ ಮಾಡಿಕೊಂಡಿದ್ದಾರೆ ಆದ್ದರಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಅವರು ಹೇಳಿದರು.* ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಮಧ್ಯಪ್ರದೇಶದ ಮಾದರಿಯಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು.* 16 ರಿಂದ 18 ವರ್ಷ ವಯಸ್ಸಿನ 10 ,000 ಹೆಣ್ಣು ಮಕ್ಕಳಿಗೆ ಪರಿಸರ ಸ್ನೇಹಿಯಾದ, ಮರು ಬಳಕೆ ಮಾಡಬಹುದಾದ ಕಪ್ ಅನ್ನು ಆರೋಗ್ಯ ಇಲಾಖೆಯು ಎರಡು ಜಿಲ್ಲೆಗಳ ಎಲ್ಲ ಸರಕಾರಿ ಹಾಗು ಅನುದಾನಿತ ಕಾಲೇಜುಗಳಲ್ಲಿ ವಿತರಿಸಿದರು.