Job Description: * ತಮ್ಮ ಆಡಳಿತ ಪಕ್ಷ ಕನ್ಸರ್ ವೆಟಿವ್ (ಟೋರಿ) ನಾಯಕತ್ವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಗುರುವಾರ ರಾಜೀನಾಮೆಯನ್ನು ಘೋಷಿಸಿದ್ದಾರೆ ಆದರೆ ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿ ಯಾಗಿ ಮುಂದುವರಿಯಲಿದ್ದಾರೆ * ಹೊಸ ಪ್ರಧಾನಿ ಮತ್ತು ನಾಯಕನ ಹೆಸರನ್ನು ಅಕ್ಟೋಬರ್‌ನಲ್ಲಿ ನಿಗದಿಯಂತೆ ನಡೆಯಲಿರುವ ಕನ್ಸರ್ ವೆಟಿವ್ ಪಕ್ಷದ ಅಧಿವೇಶನದಲ್ಲಿ ಘೋಷಿಸಲಿದ್ದಾರೆ.* ಪಾರ್ಟಿ ಗೇಟ್ ಮತ್ತು ಹಲವು ನೀಡಿ ಅಕ್ರಮಗಳ ಹಗರಣಗಳಿಂದ ದೇಶದಾ ದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಜಾನ್ಸನ್ ಕಳೆದ ತಿಂಗಳು ವಿಶ್ವಾಸಮತ ಗೆದ್ದು ಅಧಿಕಾರ ಉಳಿಸಿಕೊಂಡಿದ್ದರು ಸಂಸದರೇ ಜಾನ್ಸನ್ ವಿರುದ್ಧ ಬಂಡಾಯ ಸಾರಿದ್ದರಿಂದ ಈ ಬೆಳವಣಿಗೆ ನಡೆದಿತ್ತು.* ಜಾನ್ಸನ್ ನಾಯಕತ್ವದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಕಳೆದ ಎರಡು ದಿನಗಳಿಂದ ಹಣಕಾಸು ಹೊಣೆ ಹೊತ್ತಿರುವ ರಿಷಿ ಸುನಕ ಸಹಿತ ಹಿರಿಯ ಮತ್ತು ಕಿರಿಯರು ಸೇರಿ 13 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.* ವಿಶ್ವದಲ್ಲೇ ಅತ್ಯುತ್ತಮವಾದ ಹುದ್ದೆಯನ್ನು ತೊರೆಯಲು ದುಃಖಿತನಾಗಿದ್ದೇನೆ ಎಂದು ರಾಜೀನಾಮೆ ಸಲ್ಲಿಸಿದ ನಂತರ ಪ್ರಧಾನಿ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.* ವಿರೋಧ ಪಕ್ಷವಾದ ಲೇಬರ್ ಪಾರ್ಟಿಯು ಜಾನ್ಸನ್ ರಾಜೀನಾಮೆ ದೇಶಕ್ಕೆ ಒಳ್ಳೆ ಸುದ್ದಿ ಎಂದು ಪ್ರತಿಕ್ರಿಯಿಸಿದರು.