Job Description: * ಭಾರತದ ಸ್ವಾತಂತ್ರ್ಯದ ಅಮೃತೋತ್ಸವದ ನಿಮಿತ್ತ ಶಿಕ್ಷಣ ಪಡೆಯಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಿಂದ ಜಾರಿಗೆ ಬರುವಂತೆ ಪೂರ್ಣಪ್ರಮಾಣದ ಸ್ಕಾಲರ್‌ಷಿಪ್ ಅನ್ನು ಬ್ರಿಟನ್ ಪ್ರಕಟಸಿದೆ.* ಬ್ರಿಟನ್‌ನಲ್ಲಿ ಶಿಕ್ಷಣ ಪಡೆಯುವವರಿಗೆ 75 ಪೂರ್ಣಪ್ರಮಾಣದ ಸ್ಕಾಲರ್‌ಷಿಪ್ ನೀಡಲಾಗುವುದು ಎಂದು ತಿಳಿಸಿದ್ದಾರೆ.* ಭಾರತದ ಪ್ರಮುಖ ಉದ್ಯಮಗಳ ಸಂಸ್ಥೆಗಳು ಪಾಲುದಾರಿಕೆಯಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ ಎಂದು ಬ್ರಿಟನ್‌ ತಿಳಿಸಿದೆ.* ಯು.ಕೆ. ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳು ದಾಖಲಾಗಬಹುದು ಪ್ರತಿ ವಿಷಯದಲ್ಲಿ ಸ್ಕಾಲರ್‌ಷಿಪ್ ನೀಡಲಾಗುವುದು ಎಂದು ಹೇಳಿದ್ದಾರೆ.* 18 ವಿದ್ಯಾರ್ಥಿ ವೇತನವನ್ನು ಮಹಿಳೆಯರಿಗೆ ಬ್ರಿಟಿಷ್ ಕೌನ್ಸಿಲ್ ಆಫ್ ಇಂಡಿಯಾ ಘೋಷಿಸಿದೆ.* ಬ್ರಿಟನ್‌ನಲ್ಲಿನ 150 ವಿಶ್ವವಿದ್ಯಾಲಯಗಳಲ್ಲಿ 12 ಸಾವಿರ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನವು ಅಳವಡಿಸಲಾಗುತ್ತದೆ.