Job Description: * ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (ಎಂ.ಒ.ಎಸ್‌.ಪಿ.ಐ) 2022 ರ ಜೂನ್ 27 ರಿಂದ ಸರಣಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ʻಆಜಾದಿ ಕಾ ಅಮೃತ ಮಹೋತ್ಸವʼ ಸಪ್ತಾಹವನ್ನು ಆಚರಿಸುತ್ತಿದೆ* ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ರಾವ್ ಇಂದರ್ ಜಿತ್ ಸಿಂಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು* ದೀರ್ಘ ಬಾಳಿಕೆಯ ಸಮುದಾಯ ಸ್ವತ್ತುಗಳ ಅಭಿವೃದ್ಧಿಯಲ್ಲಿ ʻಎಂ.ಪಿ.ಎಲ್.ಎ.ಡಿ. ಯೋಜನೆಯ ವೈಶಿಷ್ಟ್ಯಗಳು, ಪಾತ್ರ ಮತ್ತು ಕೊಡುಗೆಯನ್ನುಕಿರು ಸಾಕ್ಷ್ಯಚಿತ್ರ ಮತ್ತು ವಸ್ತು ಪ್ರದರ್ಶನದ ಮೂಲಕ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.* ಈ ಆಚರಣೆಯ ಭಾಗವಾಗಿ, ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆ (ʻಎಂ.ಪಿ.ಎಲ್.ಎಡಿ.ಎಸ್ʼ) ಮತ್ತು ʻಐ.ಪಿ.ಎಂʼ ವಿಭಾಗವು 2022 ರ ಜೂನ್ 28ರಂದು ನವದೆಹಲಿಯ ʻಎನ್‌.ಡಿ.ಎಂ.ಸಿ. ಕನ್ವೆನ್ಷನ್ ಸೆಂಟರ್‌ನಲ್ಲಿ ಅರ್ಧ ದಿನದ ಕಾರ್ಯಕ್ರಮವನ್ನು ಆಯೋಜಿಸಿತು.