Job Description: * ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬಾಲ ನಟರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕರಡು ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದಾರೆ ಸಿನಿಮಾ, ಕಿರುತೆರೆ, ರಿಯಾಲಿಟಿ ಷೋ ಹಾಗು ಇತರೆ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ ಈ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.* ಬಾಲ ನಟರು 27 ದಿನ ನಿರಂತರವಾಗಿ ಕೆಲಸ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ ಮತ್ತು ಬಾಲ ನಟನ ಹೆಸರಿನ್ನಲ್ಲಿ ರಾಷ್ಟ್ರೀ ಕೃತ ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಾಗಿ ಶೇ 20 ರಷ್ಟನ್ನು ಬ್ಯಾಂಕ್ ನಲ್ಲಿ ಇಡಬೇಕು ಎಂದು ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆದೇಶ ಹೊರಡಿಸಿದೆ.* ಈ ಮಾರ್ಗ ಸೂಚಿಯಲ್ಲಿ ಕಿರುತೆರೆ, ಸಿನಿಮಾ ಅಲ್ಲದೆ ಸುದ್ದಿ ವಾಹಿನಿಗಳು ಸವಂಹನ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು ಹಾಗು ಮಕ್ಕಳು ಭಾಗಿ ಯಾಗುವ ಎಲ್ಲ ರೀತಿಯ ಮನರಂಜನಾ ಕಾರ್ಯಕ್ರಮಗಳು ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗ ಸೂಚಿಯಲ್ಲಿ ಒಳಪಡುತ್ತದೆ.* ಬಾಲ ನಟರನ್ನು ಚಿತ್ರೀಕರಣದಲ್ಲಿ ಭಾಗವಹಿಸುವ ಮುನ್ನ ಆ ಕೆಲಸದ ಸ್ಥಳದಲ್ಲಿ ಆರೋಗ್ಯಕರ ವಾತಾವರಣವನ್ನು ನೀಡುವುದು ಮತ್ತು ಅದಕ್ಕೂ ಮುಂಚೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಂದ ಅನುಮತಿ ಪಡೆಯಬೇಕು ಎಂದು ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತಿಳಿಸಿದೆ.