Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ ಪೋ - 2022 ಅನ್ನು ಉದ್ಘಾಟಿಸಿದರು. ಅವರು ಜೈವಿಕ ತಂತ್ರಜ್ಞಾನ ಉತ್ಪನ್ನಗಳ ಇ-ಪೋರ್ಟಲ್ ಗೂ ಸಹ ಚಾಲನೆ ನೀಡಿದರು. * ಕಳೆದ 8 ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆಯು 8 ಪಟ್ಟು ಬೆಳೆದಿದೆ ಎಂದರು. “ನಾವು 10 ಶತಕೋಟಿಯಿಂದ ಡಾಲರ್ ನಿಂದ 80 ಶತಕೋಟಿ ಡಾಲರ್ ಗೆ ಬೆಳೆದಿದ್ದೇವೆ. ಬಯೋಟೆಕ್‌ನ ಜಾಗತಿಕ ಪರಿಸರ ವ್ಯವಸ್ಥೆಯಲ್ಲಿ ಅಗ್ರ 10 ದೇಶಗಳ ಗುಂಪು ತಲುಪಲು ಭಾರತವು ತುಂಬಾ ದೂರ ಕ್ರಮಿಸಬೇಕಿಲ್ಲ’’ಎಂದು ಪ್ರಧಾನಮಂತ್ರಿ ಅವರು ಹೇಳಿದರು.* ಭಾರತವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳ ತಾಣವೆಂದು ಪರಿಗಣಿಸಲು ಐದು ದೊಡ್ಡ ಕಾರಣಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಮೊದಲನೆಯದು- ಜನಸಂಖ್ಯಾ ವೈವಿಧ್ಯತೆ ಮತ್ತು ವೈವಿಧ್ಯಮಯ ಹವಾಮಾನ ಖುತುಗಳು, ಎರಡನೆಯದು- ಭಾರತದ ಪ್ರತಿಭಾವಂತ ಮಾನವ ಸಂಪನ್ಮೂಲದ ಗುಂಪು, ಮೂರನೆಯದು- ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಹೆಚ್ಚಿನ ಅವಕಾಶಗಳಿರುವುದು, ನಾಲ್ಕನೆಯದು- ಭಾರತದಲ್ಲಿ ಜೈವಿಕ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಐದನೆಯದಾಗಿ- ಭಾರತದ ಬಯೋಟೆಕ್ ವಲಯ ಮತ್ತು ಅದರ ಯಶಸ್ಸಿನ ದಾಖಲೆ. * ಜೈವಿಕ ತಂತ್ರಜ್ಞಾನ ವಲಯಕ್ಕೂ ಸಹ, ನವೋದ್ಯಮ ಪೂರಕ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಕಂಡುಬರುವ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. “ಕಳೆದ 8 ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಸ್ಟಾರ್ಟ್‌ಅಪ್ಗಳ ಸಂಖ್ಯೆಯು ನೂರರಿಂದ 70 ಸಾವಿರಕ್ಕೆ ಹೆಚ್ಚಳವಾಗಿದೆ.* ಈ 70 ಸಾವಿರ ಸ್ಟಾರ್ಟ್‌ಅಪ್‌ಗಳು ನಾನಾ ಕೈಗಾರಿಕೆಗಳಲ್ಲಿ ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ.* ಆ ಪೈಕಿ 5 ಸಾವಿರಕ್ಕೂ ಅಧಿಕ ನವೋದ್ಯಮಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು.* ಪ್ರತಿ 14 ನೇ ಸ್ಟಾರ್ಟ್‌ಅಪ್‌ಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿದ ಒಂದು ಇದೆ ಮತ್ತು 1100 ಕ್ಕೂ ಅಧಿಕ ಜೈವಿಕ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಕಳೆದ ವರ್ಷವೇ ಉದಯವಾಗಿವೆ’’ ಎಂದು ಪ್ರಧಾನಿ ಮಾಹಿತಿ ನೀಡಿದರು.