Job Description: * ಲೇಖಕಿ ಗೀತಾಂಜಲಿಶ್ರೀ ಅವರ ಟಾಂಬ್ ಆಫ್ ಸ್ಟ್ಯಾಂಡ್ ಕಾದಂಬರಿಗೆ 2022 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ* ಈ ಕೃತಿಯನ್ನು ಅಮೆರಿಕದ ಡೇಸಿ ರಾಕ್‍ವೆಲ್ ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ.* ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಕಾದಂಬರಿ ಇದಾಗಿದೆ.* ಉತ್ತರ ಪ್ರದೇಶದ ಮೈನಾಪುರದಲ್ಲಿ ಜನಿಸಿರುವ ಗೀತಾಂಜಲಿಶ್ರೀ ಅವರು ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಮೂರು ಕಾದಂಬರಿ ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ.* ಲೇಖಕಿ ಗೀತಾಂಜಲಿ ಶ್ರೀ ಅವರು ಬರೆದಿರುವ ಕೆಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನ್ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.* ಗೀತಾಂಜಲಿಯವರ ಟಾಂಬ್ ಆಫ್ ಸ್ಟ್ಯಾಂಡ್ ಬ್ರಿಟನ್‍ನಲ್ಲಿ ಪ್ರಕಟವಾಗಿರುವ ಮೊದಲ ಕೃತಿಯಾಗಿದೆ* ಈ ಪ್ರಶಸ್ತಿಯ ಮೊತ್ತ 49 ಲಕ್ಷ ( 50,000 ಪೌಂಡ್ ) , ಬಹುಮಾನದ ಮೊತ್ತವನ್ನು ಅವರು ಕೃತಿಯ ಅನುವಾದಕರಾದ ಡೈಸಿ ರಾಕ್‌ವೆಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.