Job Description: * ಈ ವರ್ಷದ ಡಿಸೆಂಬರ್ ವೇಳೆಗೆ ಸೇವೆ ಆರಂಭಿಸಲಿರುವ ದೇಶದ ಪ್ರಪ್ರಥಮ ಸೆಮಿ ಹೈಸ್ಪೀಡ್ ಸರಕು ಸಾಗಣಿ ರೈಲು ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.* ' ವಂದೇ ಭಾರತ್ ' ರೈಲುಗಳ ಮಾದರಿಯಲ್ಲಿ 16 ಬೋಗಿಗಳಿರುವ “ ಗತಿ ಶಕ್ತಿ ' ರೈಲು ಕಾರ್ಯಾರಂಭ ಮಾಡಲಿದೆ.* ಇದರ ವೇಗ ಗಂಟೆಗೆ 160 ಕಿ.ಮೀ. ಚೆನ್ನೈನಲ್ಲಿ ಇರುವ ಸಮಗ್ರ ಬೋಗಿ ನಿರ್ಮಾಣ ( ಐಸಿಎಫ್ ) ಇದರ ನಿರ್ಮಾಣ ನಡೆಯಲಿದೆ.* ಪ್ರಧಾನಿಯವರ “ ಗತಿ ಶಕ್ತಿ ' ರೈಲು ಸೇವೆ ಚಿಂತನೆ ಸಾಕಾರಗೊಳಿಸಲು ರೈಲ್ವೆ ಮಂಡಳಿಯಲ್ಲಿ ಪ್ರತ್ಯೇಕ ವಿರ್ದೇಶನಾ ಲಯವನ್ನು ರಚಿಸಲಾಗಿದೆ . * ಇದನ್ನು ಜಾರಿಗೊಳಿಸಲು ಬೆಂಗಳೂರು , ದೆಹಲಿ , ಬಿಲಾಸ್‌ಪುರ್‌ದಲ್ಲಿಯೂ ಶಾಖೆ ತೆರೆಯಲಾಗಿದೆ.* ಭಾರತ ಒಟ್ಟು 25 ರೈಲು ಆರಂಭಿಸುವ ಗುರಿ ಇದೆ * ಮಾರುಕಟ್ಟೆಯಲ್ಲಿನ ಪ್ರತಿಕ್ರಿಯೆ ಆಧರಿಸಿ ಇಂತಹ ಎಷ್ಟು ರೈಲುಗಳ ಸೇವೆ ಆರಂಭಿಸಬೇಕು ಎಂದು ನಿರ್ಧರಿಸಲಾಗುವುದು