Job Description: * ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್ , ರಷ್ಯಾ , ಭಾರತ , ಚೀನಾ ಮತ್ತು ದಕ್ಷಿಣ ಅಫ್ರಿಕಾ ಬಾಹ್ಯಾಕಾಶ ಸಹಕಾರದ ಜಂಟಿ ಸಮಿತಿಯನ್ನು ಅಧಿಕೃತವಾಗಿ ಪ್ರಾರಂಭಿಸಿವೆ* ಬ್ರಿಕ್ಸ್‌ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ದೂರಸಂವೇದಿ ಉಪಗ್ರಹ ಪರಿವೀಕ್ಷಣೆ ಮತ್ತು ದತ್ತಾಂಶ ಹಂಚಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಉದ್ದೇಶದಿಂದ ಈ ಜಂಟಿ ಸಮಿತಿ ಪ್ರಾರಂಭಿಸಿವೆ.* ಬ್ರಿಕ್ಸ್‌ ರಿಮೋಟ್ ಸೆನ್ಸಿಂಗ್ ಉಪಗ್ರಹ ಸಮೂಹ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದವು.* ಈ ವರ್ಷದ ಅಧ್ಯಕ್ಷ ಸ್ಥಾನ ಚೀನಾಕ್ಕೆ ಸಿಕ್ಕಿದೆ.