Job Description: * ಮುಂಬೈನಲ್ಲಿ ಮೊದಲ ಬಾರಿಗೆ ನೀರಿಗೆ ಇಳಿಯಲಿರುವ ದೇಶೀ ನಿರ್ಮಿತ ಎರಡು ಹೊಸ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಇತ್ತೀಚಿಗೆ ಸೇರ್ಪಡೆಗೊಂಡವು. * ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ' ಸೂರತ್ ' ಮತ್ತು ' ಉದಯಗಿರಿ ' ಎಂಬ ಹೆಸರಿನ ನೌಕೆಗಳಿಗೆ ಅವರು ಚಾಲನೆ ನೀಡಿದರು. * ದೇಶಿ ನಿರ್ಮಿತ ಯುದ್ಧನೌಕೆಗಳು ಭಾರತದ ವ್ಯೂಹಾತ್ಮಕ ಶಕ್ತಿ ಮತ್ತು ಸ್ವಾವಲಂಬನೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. * ಸ್ಟೆಲ್ತ್ ಡಿಸ್ಟ್ರಾಯರ್‌ಗಳಲ್ಲಿ ನಾಲ್ಕನೇ ಮತ್ತು ಕೊನೆಯದಾಗಿರುವ "ಪ್ರಾಜೆಕ್ಟ್ 15 ಬಿ' ಕಾರ್ಯಕ್ರಮದ ಅಡಿಯಲ್ಲಿ ಮೊದಲನೆಯ ಹಡಗು ನಿರ್ಮಾಣವಾಗಿದ್ದರೆ, ಎರಡನೇ ಹಡಗು 'ಪ್ರಾಜೆಕ್ಟ್ 17 ಎ' ಫ್ರಿಗೇಟ್ ಕಾರ್ಯಕ್ರಮದ ಭಾಗವಾಗಿದೆ.