Job Description: * ಜೈಮೆಕ್ಕಾದ ರಾಜಧಾನಿ ಕಿಂಗ್ ಸ್ಟನ್ ನಲ್ಲಿ ಭಾರತದ ಸಂವಿಧಾನ ಶಿಲ್ಪಿಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಿಂದ ನಾಮಕರಣ ಮಾಡಲಾದ ಬೀದಿ ಮತ್ತು ಅವರ ಜೀವನ ಸಾಧನೆ ತಿಳಿಸುವ ಸ್ಮಾರಕವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದರು* ಅಂಬೇಡ್ಕರ್ ಸ್ಮಾರಕ ವನ್ನು ಸಚಿವ ಡೆಸ್ಮಂಡ್ ಮೆಕೆಂಜಿ ಮತ್ತು ರಾಮನಾಥ್ ಕೋವಿಂದ್ ಅವರು ಅನಾವರಣಗೊಳಿಸಿದರು. ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್ ಕೂಡ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.* ರಾಮನಾಥ್ ಕೋವಿಂದ್ ಅವರು ಈ ಸಂದರ್ಭದಲ್ಲಿ ಮಾತನಾಡುವಾಗ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಅಸಮಾನತೆ ನಿರ್ಮೂಲನೆಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ* ಬಿ ಆರ್ ಅಂಬೇಡ್ಕರ್ ರವರು ಹಿಂದುಳಿದ ವರ್ಗಗಳು, ಸಾಮಾಜಿಕ, ಆರ್ಥಿಕ ಸಬಲೀಕರಣದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿದ್ದಾರೆ