Job Description: * ರಾಜಸ್ಥಾನದ ರಾಮಗಡ ವಿಶ್ಧಾರಿ ಅಭಯಾರಣ್ಯವನ್ನು ಭಾರತದ 52 ನೇ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವನ್ನಾಗಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಘೋಷಣೆ ಮಾಡಿದ್ದಾರೆ. * ರಾಮಗಡ ವಿಶ್ಧಾರಿ ಅಭಯಾರಣ್ಯವು ರಾಜಸ್ಥಾನದ 4 ನೇ ಹುಲಿ ಸಂರಕ್ಷಿತಾರಣ್ಯವಾಗಿದೆ. ರಾಜಸ್ಥಾನದಲ್ಲಿನ ರಣತಂಬೂರ್ , ಸಾರಿಸ್ಕಾ ಹಾಗೂ ಮುಕುಂದರಾ ಮೊದಲಿನ ಹುಲಿ ಸಂರಕ್ಷಿತಾರಣ್ಯಗಳು * 2019 ರ ಮನರಂಜನೆ ಹುಲಿ ಗಣತಿ ವರದಿ ಪ್ರಕಾರ ಭಾರತದಲ್ಲಿ 2,967 ಹುಲಿಗಳು ಇರುವುದು ಕಂಡು ಬಂದಿದೆ.* 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವನ್ಯಜೀವಿಗಳನ್ನು, ಪರಿಸರವನ್ನು ಹಾಗೂ ವನ್ಯಸಂಪತ್ತನ್ನು ಉಳಿಸಲು ಬದ್ಧವಾಗಿದೆ, ರಾಮಗಡ ವಿಶ್ಧಾರಿ ಹುಲಿ ಸಂರಕ್ಷಿತಾರಣ್ಯ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.