Job Description: * ಕಾಡ್ಗಿಚ್ಚುನಿಯಂತ್ರಿಸು ಸಲುವಾಗಿ 53 ವರ್ಷಗಳ ಹವಾಮಾನ ಮಾಹಿತಿಯನ್ನು ಸಂಗ್ರಹಿಸಿ ತಂತ್ರಜ್ಞರ ತಂಡವೊಂದು ಆರ್ಟಿಫೀಶಿಯಲ್ ಇಂಟಲಿಜನ್ಸ್ ಲೇಸರ್ ಆಧಾರಿತ ಉಪಕರಣವನ್ನು ಕಂಡು ಹಿಡಿದಿದ್ದಾರೆ * ಆರ್ಟಿಫೀಶಿಯಲ್ ಇಂಟಲಿಜನ್ಸ್ ತಂತ್ರಜ್ಞಾನವನ್ನು ಬಳಸಿ ಅರಣ್ಯ ಪ್ರದೇಶದಲ್ಲಿ 7 ದಿನಗಳ ಮುಂಚಿತವಾಗಿ ಎಲ್ಲಿ ಕಾಡ್ಗಿಚ್ಚು ಆರಂಭವಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ನೀಡುವ ಸಾಧನ ಇದಾಗಿದೆ* ಕಾಳ್ಗಿಚ್ಚು ಸಂಭವಿಸುವ ಬಗ್ಗೆ ಮಾಹಿತಿ ದೊರೆತರೆ ಅದರಿಂದಾಗುವ ಪ್ರಯೋಜನಗಳು ಹೀಗಿವೆ 1 ಕಾಳ್ಗಿಚ್ಚು ನಿಯಂತ್ರಣಕ್ಕೆ ಅಗತ್ಯವಾದ ಕಾರ್ಯಾಚರಣೆಯನ್ನು ರೂಪಿಸುವುದು ಮತ್ತು ಅಗ್ನಿ ನಿಯಂತ್ರಣಕ್ಕೆ ಬೇಕಾದ ಸಿಬ್ಬಂದಿ ವಾಹನಗಳು ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ 2 ಕಾಳ್ಗಿಚ್ಚಿನ ಹತ್ತಿರದ ವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವುದು ಸಾಧ್ಯವಾಗುತ್ತದೆ 3 ಕಾಳ್ಗಿಚ್ಚಿನಲ್ಲಿ ಹಾಳಾಗುವ ದೂರವಾಣಿ ವಿದ್ಯುತ್ ಕುಡಿಯುವ ನೀರು ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಸಾಧ್ಯವಾಗುತ್ತದೆ* ಕಾಡಿಗೆ ಬೆಂಕಿ ಇಡುವ ಅಪರಾಧಿಗಳಿಂದ ನಮ್ಮ ದೇಶದಲ್ಲಿ ಪ್ರತಿವರ್ಷ ಸಾವಿರಾರು ಎಕರೆ ಅರಣ್ಯ ಪ್ರದೇಶವು ಅಗ್ನಿಗೆ ಆಹುತಿಯಾಗುತ್ತಿದೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಂತಹ ತಂತ್ರಜ್ಞಾನ ಬಳಸಿ ಕಾಡ್ಗಿಚ್ಚು ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದಾಗಿದೆ