Job Description: * ಇದೇ 2022 ರ ಸೆಪ್ಟೆಂಬರ್ 10 ರಿಂದ 25 ರವರೆಗೆ ಚೀನಾದ ಹಾಂಗ್ಝೌನಲ್ಲಿ ನಡೆಯಬೇಕಿದ್ದ 19 ನೇ ಏಷ್ಯನ್ ಕ್ರೀಡಾಕೂಟವನ್ನು ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಮಹಾನಿರ್ದೇಶಕ ಫ್ರಿ. ಹಾಂಗ್ಝೌ ಅವರು ಮಾಹಿತಿ ನೀಡಿದ್ದಾರೆ. * ಇದೀಗ ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಈ ಕಾರಣದಿಂದಾಗಿ ಏಷ್ಯನ್ ಗೇಮ್ಸ್'ನ್ನು ಕೋವಿಡ್ ನಿಯಂತ್ರಣದ ಮುಂಜಾಗೃತಾ ಕ್ರಮವಾಗಿ ಮುಂದೂಡಲಾಗಿದೆ ಎಂದಿದ್ದಾರೆ. * ಏಷ್ಯಾಡ್ ಎಂದೂ ಕರೆಯಲ್ಪಡುವ ಏಷ್ಯನ್ ಗೇಮ್ಸ್'ನ್ನು ಏಷ್ಯಾದಾದ್ಯಂತದ ಕ್ರೀಡಾಪಟುಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೆ ನಡೆಯುವ ಕಾಂಟಿನೆಂಟಲ್ ಬಹು-ಕ್ರೀಡಾ ಕಾರ್ಯಕ್ರಮವಾಗಿದೆ. ಏಷ್ಯನ್ ಗೇಮ್ಸ್ ಫೆಡರೇಶನ್ (AGF) ನಿಂದ ಭಾರತದ ಹೊಸ ದೆಹಲಿಯಲ್ಲಿ ನಡೆದ ಮೊದಲ ಕ್ರೀಡಾಕೂಟದಿಂದ 1978 ರ ಕ್ರೀಡಾಕೂಟದವರೆಗೆ ಕ್ರೀಡಾಕೂಟಗಳನ್ನು ನಿಯಂತ್ರಿಸಲಾಗಿದೆ. ನಂತರ 1982 ರ ಕ್ರೀಡಾಕೂಟದಿಂದ, ಏಷ್ಯನ್ ಗೇಮ್ಸ್ ಫೆಡರೇಶನ್ ವಿಘಟನೆಯ ಬಳಿಕ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ನಿಂದ ಈ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟವು ಒಲಿಂಪಿಕ್ ಕ್ರೀಡಾಕೂಟದ ನಂತರ 2 ನೇ ಅತಿ ದೊಡ್ಡ ಬಹು-ಕ್ರೀಡಾ ಕಾರ್ಯಕ್ರಮವಾಗಿದೆ. * ಏಷ್ಯನ್ ಕ್ರೀಡಾಕೂಟವನ್ನು '09' ರಾಷ್ಟ್ರಗಳು ಆಯೋಜಿಸಿವೆ. ಈ ಹಿಂದೆ 2018 ರ ಆಗಸ್ಟ್‌.18 ರಿಂದ ಸೆಪ್ಟೆಂಬರ್.2 ರವರೆಗೆ ಈ ಕ್ರೀಡಾಕೂಟವನ್ನು ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಾಂಗ್‌ನಲ್ಲಿ ನಡೆಸಲಾಗಿದೆ. ಇದಾದ ಬಳಿಕ ಮುಂದಿನ ಕ್ರೀಡಾಕೂಟವನ್ನು ಚೀನಾದ ಹ್ಯಾಂಗ್‌ಝೌನಲ್ಲಿ 2022 ರ ಸೆಪ್ಟೆಂಬರ್. 10 ರಿಂದ 25 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು.