Job Description: * ಕೆನಡಾದ ಜೈವಿಕ ತಂತ್ರಜ್ಞಾನ ಕಂಪನಿಯಾಗಿರುವ ಮೆಡಿಕಾಗೋ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಸಸ್ಯ ಆಧಾರಿತ ಕೋವಿಡ್ -19 ಲಸಿಕೆಯು ಕೊರೊನಾ ವೈರಸ್‌ನ '05' ರೂಪಾಂತರಗಳಿಂದ ಉಂಟಾಗುವ ರೋಗಲಕ್ಷಣದ ರೋಗಿಗಳ ವಿರುದ್ಧ ಸುಮಾರು 70% ಪರಿಣಾಮಕಾರಿಯಾಗಿದೆ ಎಂದಿದ್ದಾರೆ. * ಸಸ್ಯ ಆಧಾರಿತ ಲಸಿಕೆಗೆ ಕೋವಿಫೆಂಜ್ ಎಂದು ಹೆಸರಿಸಲಾಗಿದೆ, ಈ ಲಸಿಕೆಯು ಕೊರೊನಾ ವೈರಸ್ ರೀತಿಯ ಕಣಗಳನ್ನ (CoVLP) ಹೊಂದಿರುತ್ತದೆ. ಈ ಲಸಿಕೆಯ ಪರಿಣಾಮಕಾರಿತ್ವವು ಮಧ್ಯಮದಿಂದ ತೀವ್ರವಾದ ರೋಗದ ವಿರುದ್ಧ ಹಾಗೂ ಆರಂಭದಲ್ಲಿ ಸೆರೊನೆಗೇಟಿವ್ ಆಗಿದ್ದವರಲ್ಲಿ ಕ್ರಮವಾಗಿ 78.8 ಹಾಗೂ 74% ಆಗಿತ್ತು ಈ ಲಸಿಕೆಯ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಈ ಲಸಿಕೆಯ 3ನೇ ಹಂತದ ಪ್ರಯೋಗವನ್ನು ಸುಮಾರು 24,141 ವಯಸ್ಕರನ್ನು ಸೇರಿರುವ 85 ಕೇಂದ್ರಗಳಲ್ಲಿ ನಡೆಸಲಾಗಿದೆ, 21 ದಿನಗಳ ಅಂತರದಲ್ಲಿ ಕೋವಿಎಲ್ಪಿ MS03 ಲಸಿಕೆಯ ಚುಚ್ಚುಮದ್ದನ್ನು ಪಡೆಯಲು ತಿಳಿಸಲಾಗಿದೆ. * ಆದರೆ ಈ ಸಸ್ಯ ಆಧಾರಿತ ಲಸಿಕೆಯ ಮೂಲಕ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಇದರ ಪರಿಣಾಮಕಾರಿತ್ವವನ್ನ ನಿರ್ಧರಿಸಲು ಸಾಧ್ಯವಿಲ್ಲ, ಕಾರಣ ಇದು ವಯಸ್ಸಿನ ಗುಂಪಿನಲ್ಲಿ ಭಾಗವಹಿಸುವವರ ಸೀಮಿತ ದಾಖಲಾತಿಯಿಂದಾಗಿ ಎಂದಿದ್ದಾರೆ. * ವಿಶ್ವ ಆರೋಗ್ಯ ಸಂಸ್ಥೆ (WHO) ಇದೇ ವರ್ಷದ ಮಾರ್ಚ್‌ನಲ್ಲಿ ಸಿಗರೇಟು ತಯಾರಕ ಫಿಲಿಪ್ ಮೋರಿಸ್ ಇಂಟರ್ನ್ಯಾಷನಲ್ ಇಂಕ್ನೊಂದಿಗೆ ಸಂಪರ್ಕ ಹೊಂದಿರುವ ಹಿನ್ನಲೆಯಿಂದಾಗಿ ಈ ಮೆಡಿಕಾಗೋ ಇಂಕ್ನ ಕೋವಿಡ್ ಲಸಿಕೆಯನ್ನು ತಿರಸ್ಕರಿಸಿತು ಎನ್ನಲಾಗಿತ್ತು.