Job Description: * ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾಗಿರುವ ಝೊಮಾಟೊ ಇದೀಗ ಅದರ ಸಂಸ್ಥಾಪಕ ಹಾಗೂ CEO ದೀಪಿಂದರ್ ಗೋಯಲ್ ತನ್ನ ವಿತರಣಾ ಪಾಲುದಾರರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಸ್ಥಾಪಿತ ಇಎಸ್‌ಒಪಿಗಳಿಂದ ಜೊಮಾಟೊ ಫ್ಯೂಚರ್ ಫೌಂಡೇಶನ್‌ಗೆ ಸರಿ ಸುಮಾರು 700 ಕೋಟಿ ರೂ. ದೇಣಿಗೆ ನೀಡಲಿದ್ದಾರೆ. * ಜೊಮ್ಯಾಟೊ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ಆಗುವದಕ್ಕಿಂತ ಮೊದಲು ಗೋಯಲ್ ಅವರಿಗೆ ಹೂಡಿಕೆದಾರರು ಹಾಗೂ ಆಡಳಿತ ಮಂಡಳಿಯ ವತಿಯಿಂದ ಷೇರುಗಳು 'ನೌಕರರ ಷೇರು ಮಾಲೀಕತ್ವ ಯೋಜನೆ'ಯ (ESOP) ಅಡಿಯಲ್ಲಿ ಲಭ್ಯವಾಗಿತ್ತು. * ಈ ಎಲ್ಲ ಷೇರುಗಳನ್ನು ಜೊಮ್ಯಾಟೊ ಫ್ಯೂಚರ್ ಪ್ರತಿಷ್ಠಾನಕ್ಕೆ ಒದಗಿಸಲಾಗುತ್ತದೆ. ಹಾಗೂ ಇದರ ಪ್ರತಿಷ್ಠಾನವು ಈ ಹಣವನ್ನು ವಿತರಕರ ಇಬ್ಬರು ಮಕ್ಕಳ ವಾರ್ಷಿಕ ಗರಿಷ್ಠ ಅಂದರೆ ಸುಮಾರು 50 ಸಾವಿರದವರೆಗಿನ ಶಿಕ್ಷಣ ವೆಚ್ಚಕ್ಕೆ ಸಹಾಯವನ್ನು ಕಲ್ಪಿಸಲು ಬಳಕೆಮಾಡಲಾಗುತ್ತದೆ. ಈ ಕಂಪನಿಯ ಜೊತೆ '05' ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಕಾರ್ಯ ನಿರ್ವಹಿಸುತ್ತಿರುವ ವಿತರಕರ ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. * ಅಂದರಂತೆಯೇ 10 ವರ್ಷ ಜೊಮ್ಯಾಟೊ ಕಂಪನಿಯಲ್ಲಿ ಕೆಲಸ ಮಾಡಿದರೆ ಅವರ ಮಕ್ಕಳಿಗೆ ವಾರ್ಷಿಕ 1 ಲಕ್ಷದವರೆಗಿನ ಶಿಕ್ಷಣದ ವೆಚ್ಚಕ್ಕೆ ಕಂಪನಿ ವತಿಯಿಂದ ಭರಿಸಲಾಗುತ್ತದೆ ಎಂದು ಗೋಯಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಮಹಿಳಾ ವಿತರಕರಿಗೆ ಯಾವುದೇ ರೀತಿಯ ಅಂದರೆ 5-10 ವರ್ಷಗಳ ಮಾನದಂಡಗಳು ವಿರುವದಿಲ್ಲ ಎಂದಿದ್ದಾರೆ, ಮಹಿಳಾ ವಿತರಿಕರಿಗೆ ಕಡಿಮೆ ಅವಧಿಯಿಂದ ಕರ್ತವ್ಯದಲ್ಲಿದ್ದರೂ ಪ್ರಯೋಜನ ಲಭ್ಯವಾಗಲಿದೆ ಎಂದಿದ್ದಾರೆ. ಹಾಗೆಯೇ ಮಹಿಳಾ(ಹುಡುಗಿ) ವಿತರಕರು 12 ನೇ ತರಗತಿಯನ್ನು ಪೂರ್ಣಗೊಳಿಸಿದರೆ ಅವರಿಗಾಗಿ ಬಹುಮಾನದ ಹಣವನ್ನು ಪರಿಚಯಿಸಲಾಗುತ್ತದೆ, ಜೊತೆಗೆ ಅವರ ಪದವಿ ಶಿಕ್ಷಣಕ್ಕೆ ಸಹಾಯಯಾಸ್ತವನ್ನು ನೀಡಲಾಗುತ್ತದೆ ಎಂದಿದ್ದಾರೆ.