Job Description: * ಭಾರತೀಯ ರೈಲ್ವೇ ಸಚಿವಾಲಯದ ಹೊಸ ನೀತಿಯ ಅಡಿಯಲ್ಲಿ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೊಟ್ಟ ಮೊದಲ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಓಡಿಸಲಾಗುತ್ತದೆ. ಈ ರೈಲು 2022 ರ ಜೂನ್. 21 ರಂದು ತನ್ನ ಮೊದಲ ಪ್ರಯಾಣವನ್ನು ಆರಂಭಿಸಲಿದೆ. * ಪ್ರಸ್ತುತ ಈ ರೈಲು ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಭೇಟಿ ಕೊಡಲಿದೆ, ಅಷ್ಟೇ ಅಲ್ಲದೇ ಹಾಗೂ ಸೀತಾ ದೇವಿಯ ಜನ್ಮಸ್ಥಳವಾದ ನೇಪಾಳದ ಜನಕ್‌ಪುರ ಸ್ಥಳಕ್ಕೆ ಭೇಟಿ ನೀಡಲಿದೆ. ಈ ರೈಲಿನ ಮೊದಲ 18 ದಿನಗಳ ಪ್ರಯಾಣವು ದೆಹಲಿಯ ಸಫ್ದರ್‌ಜಂಗ್ ನಿಲ್ದಾಣದಿಂದ ಆರಂಭವಾಗಲಿದೆ. * ಈ ರೈಲು ಪ್ರವಾಸಿಗರಿಗೆ ತಾಜಾ ಸಸ್ಯಾಹಾರಿ ಊಟವನ್ನು ಒದಗಿಸಲಿದೆ. ಭದ್ರತಾ ಸಿಬ್ಬಂದಿ ಹಾಗೂ CCTV ಗಳೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ನು ಸಹ ಅಳವಡಿಸಲಾಗುವುದು. ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ಹೊಂದಿರುವ ಸುರಕ್ಷತಾ ಕಿಟ್'ನ್ನು ನೀಡಲಾಗುತ್ತದೆ. * ಈ ರೈಲು ಭಾರತದ ನಾಗರಿಕರಿಗೆ ಹಾಗೂ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ದೇಶದ ಐತಿಹಾಸಿಕ ಸ್ಥಳಗಳು, ಹಾಗೂ ಅವುಗಳ ಸಾಂಸ್ಕೃತಿಕ ಪರಂಪರೆಯನ್ನು ತೋರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಭಾರತ್ ಗೌರವ್ ಪ್ರವಾಸಿ ರೈಲುಗಳನ್ನು ಆರಂಭಿಸಿದೆ. ಈ ರೈಲುಗಳು ಕೇಂದ್ರ ಸರ್ಕಾರದ 'ದೇಖೋ ಅಪ್ನಾ ದೇಶ್' ಎಂಬ ಉಪಕ್ರಮದ ಅಡಿಯಲ್ಲಿ ಆರಂಭಿಸಲಾಗಿದೆ. * ಈ ರೈಲು ಅಯೋಧ್ಯೆ - ಶ್ರೀರಾಮನ ಜನ್ಮಸ್ಥಳ. ಪ್ರವಾಸಿಗರು ಹನುಮಾನ್ ದೇವಸ್ಥಾನ ಮತ್ತು ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. * ಬಕ್ಸರ್ ಈ ಪ್ರದೇಶದಲ್ಲಿ ಪ್ರವಾಸಿಗರು ರಾಮರೇಖಾ ಘಾಟ್ ಮತ್ತು ಮಹರ್ಷಿ ವಿಶ್ವಾಮಿತ್ರರ ಆಶ್ರಮಕ್ಕೆ ಭೇಟಿ ನೀಡುತ್ತಾರೆ. * ವಾರಣಾಸಿ ಈ ಪ್ರದೇಶದಲ್ಲಿ ಪ್ರವಾಸಿಗರು ಪ್ರಯಾಗ, ವಾರಣಾಸಿ ಸೀತಾ ಸಮಾಹಿತ್ ಸ್ಥಳ, ಚಿತ್ರಕೂಟ ಹಾಗೂ ಶೃಂಗವೇರಪುರಕ್ಕೆ ಭೇಟಿ ನೀಡಲಿದ್ದಾರೆ. * ನಾಸಿಕ್ ಇಲ್ಲಿನ ತ್ರಯಂಬಕೇಶ್ವರ ದೇವಸ್ಥಾನ ಹಾಗೂ ಪಂಚವಟಿಗೆ ಭೇಟಿ ನೀಡಲಿದ್ದಾರೆ. * ಕ್ರಿಷ್ಕಿಂಧಾ, ಹಂಪಿ, ಹಾಗೂ ಆಂಜನೇಯಾದ್ರಿ ಬೆಟ್ಟಗಳ ಮೇಲಿರುವ ಶ್ರೀ ಹನುಮಾನ್ ಜನ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. * ರಾಮೇಶ್ವರಂನ ಧನುಷ್ಕೋಡಿ ಹಾಗೂ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. * ಕಾಂಚಿಪುರಂನ ವಿಷ್ಣು ಕಂಚಿ, ಶಿವ ಕಂಚಿ ಹಾಗೂ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. * ಈ ರೈಲಿನ ಕೊನೆಯ ನಿಲುಗಡೆ ತೆಲಂಗಾಣ ರಾಜ್ಯದ ಭದ್ರಾಚಲಂ ಆಗಿದೆ. ಬಳಿಕ ಈ ರೈಲು ದೆಹಲಿಗೆ ಮರಳಲಿದೆ. ಈ ಪ್ರವಾಸದಲ್ಲಿ ರೈಲು ಸರಿ ಸುಮಾರು 8000 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ ಎಂದು ತಿಳಿಸಿದ್ದಾರೆ.