Job Description: * ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಮೂರು ಸದಸ್ಯರ ಡಿಲಿಮಿಟೇಶನ್ ಆಯೋಗವು ಇತ್ತೀಚಿಗೆ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆಗೊಳಿಸುವ ಅಂತಿಮ ಆದೇಶಕ್ಕೆ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ನೇತೃತ್ವವು ಸಹಿ ಹಾಕಲಾಗಿದೆ ಎಂದು ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಇದೀಗ ಆದೇಶದ ಪ್ರತಿ ಹಾಗೂ ಕ್ಷೇತ್ರಗಳ ಸಂಖ್ಯೆ, ಗಾತ್ರದ ಬಗೆಗಿನ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ರಾಜ್ಯಪತ್ರದ ಮೂಲಕ ಈ ಆದೇಶವನ್ನು ಹೊರಡಿಸಲಾಗುತ್ತದೆ. ಇದರ ಜೊತೆಗೆ ಪ್ರಸ್ತುತ ಕೇಂದ್ರಾಡಳಿತ ಪ್ರದೇಶದ ಸ್ಥಾನಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಏರಿಕೆ ಮಾಡಲು ಆಯೋಗವು ಪ್ರಸ್ತಾವಣೆಯನ್ನು ಮಾಡಿದೆ. * ಸದ್ಯ ಪಾಕ್ ಆಕ್ರಮಿತ ಕಾಶ್ಮೀರ(POK)ದಲ್ಲಿ 24 ಸ್ಥಾನಗಳು ಖಾಲಿ ಉಳಿದಿವೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಇಲ್ಲಿನ ಪರಿಶಿಷ್ಟ ಪಂಗಡಕ್ಕೆ ಸುಮಾರು '09' ಸ್ಥಾನಗಳನ್ನು ಪ್ರಸ್ತಾಪಿಸಿದೆ, ಅದೇ ಸಮಿತಿಯು ಜಮ್ಮುವಿಗೆ '06' ಹಾಗೂ ಕಾಶ್ಮೀರಕ್ಕೆ '01' ಹೆಚ್ಚುವರಿ ಸ್ಥಾನಕ್ಕೆ ಪ್ರಸ್ತಾವಣೆಯನ್ನು ನೀಡಿದೆ. * ಸದ್ಯ ಕಾಶ್ಮೀರದಲ್ಲಿ 46 ಸ್ಥಾನ ಹಾಗೂ ಜಮ್ಮುವಿನಲ್ಲಿ 37 ಸ್ಥಾನಗಳಿವೆ. ಈ ಹಿಂದೆ 2020 ರ ಮಾರ್ಚ್ ನಲ್ಲಿ ರಚನೆಯಾಗಿರುವ ಸಮಿತಿಗೆ ಕಳೆದ ವರ್ಷ ಒಂದು ವರ್ಷದ ಹೆಚ್ಚುವರಿ ವಿಸ್ತರಣೆಯನ್ನು ಕಲ್ಪಿಸಲಾಗಿತ್ತು. ಪ್ರಸ್ತುತ ಈ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಚುನಾವಣಾ ಆಯುಕ್ತರನ್ನು ಇದರ ಸದಸ್ಯರನ್ನಾಗಿ ಹೊಂದಿದೆ. * ಜಮ್ಮು ಮತ್ತು ಕಾಶ್ಮೀರ ಪ್ರದೇಶವು ಇದೊಂದು ಕೇಂದ್ರಾಡಳಿತ ಪ್ರದೇಶವಾಗಿ ಭಾರತದಿಂದ ನಿರ್ವಹಿಸಲ್ಪಡುವ ಪ್ರದೇಶವಾಗಿದೆ. ಇದನ್ನು 1947 ರಿಂದ ಭಾರತ ಹಾಗೂ ಪಾಕಿಸ್ತಾನದ ನಡುವಿನ ವಿವಾದದ ವಿಷಯವಾಗಿದೆ, ಅಷ್ಟೇ ಅಲ್ಲದೇ 1962 ರಿಂದ ಭಾರತ ಮತ್ತು ಚೀನಾ ನಡುವಿನ ವಿಷಯವಾಗಿದೆ. ಇದು ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಪಂಜಾಬ್‌, ಹಾಗೂ ಲಡಾಖ್‌ನ ಪ್ರದೇಶಕ್ಕೆ ಹೊಂದಿಕೊಂಡಿದೆ. * ಈ ಹಿಂದೆ 2019 ರಲ್ಲಿ ಜಮ್ಮು ರಾಜ್ಯವನ್ನು ಮರು-ರಚಿಸಲಾಯಿತು, ಹಾಗೂ ಅದನ್ನು 2019 ರ ಅಕ್ಟೋಬರ್. 31 ರಿಂದ ಜಾರಿಗೆ ಬರುವಂತೆ ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಗಿದೆ.