Job Description: * ಇದೀಗ ನಾರ್ಡಿಕ್ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ. * ನಾರ್ವೆ ಹಾಗೂ ಫಿನ್‌ಲ್ಯಾಂಡ್ ಯುಎನ್‌ಎಸ್‌ಸಿಯಲ್ಲಿ (UNSC) ಭಾರತದ ಈ ಬೇಡಿಕೆಗೆ ಬೆಂಬಲವನ್ನು ನೀಡಿದ್ದಾರೆ. ಇನ್ನಿತರ ನಾರ್ಡಿಕ್ ದೇಶಗಳಾಗಿರುವ ಡೆನ್ಮಾರ್ಕ್, ಐಸ್ಲ್ಯಾಂಡ್ ಹಾಗೂ ಸ್ವೀಡನ್ ದೇಶಗಳು ಈ ಅಂತರರಾಷ್ಟ್ರೀಯ ಆದೇಶಕ್ಕೆ ಬೆಂಬಲವನ್ನು ಸೂಚಿಸಿವೆ. * ಭಾರತವು ಭದ್ರತಾ ಮಂಡಳಿಯನ್ನು ಸೇರಿದಂತೆ ವಿಶ್ವಸಂಸ್ಥೆಯ ಸುಧಾರಣೆಗೆ ದೇಶಗಳ ಜೊತೆಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಹೇಳಿದೆ, ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ವರದಿ ಮಾಡಿದೆ. * ಭಾರತವು ಸುಮಾರು ಒಂದು ದಶಕದಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ನೀಡುವಂತೆ ಕೇಳಿಕೊಂಡಿತ್ತು, ಆದರೆ ಇದಕ್ಕೆ ಚೀನಾ ದೇಶವು ಒಪ್ಪಿಗೆಯನ್ನು ನೀಡಿರಲಿಲ್ಲ, ಆದರೆ ಇದೀಗ ನಾರ್ಡಿಕ್ ದೇಶಗಳಿಂದ ಬೆಂಬಲ ಲಭ್ಯವಾಗಿದೆ ಎಂದಿದ್ದಾರೆ. ಇದೀಗ ಭಾರತವು ನಾರ್ಡಿಕ್ ದೇಶಗಳ ಜೊತೆಗೆ ಸಹಿ ಮಾಡಿರುವ ದ್ವಿಪಕ್ಷೀಯ ಒಪ್ಪಂದಗಳು, ಯುಎನ್‌ಎಸ್‌ಸಿಯ ಭಾರತದ ಶಾಶ್ವತ ಸದಸ್ಯತ್ವಕ್ಕೆ ಬೆಂಬಲವಾಗಿದೆ ಎಂದಿದ್ದಾರೆ. * ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ, ಫಿನ್‌ಲ್ಯಾಂಡ್, ಸ್ವೀಡನ್, ಡೆನ್ಮಾರ್ಕ್ ಹಾಗೂ ಐಸ್‌ಲ್ಯಾಂಡ್‌ ನ ಪ್ರಧಾನ ಮಂತ್ರಿಗಳನ್ನು ಜೊತೆ ಮಾತನಾಡಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಿಷ್ಠಗೊಳಿಸುವದರ ಬಗ್ಗೆ ಚರ್ಚಿಸಿದ್ದಾರೆ. * ಪ್ರಸ್ತುತ ನಾರ್ಡಿಕ್ ದೇಶಗಳು ಉತ್ತರ ಯುರೋಪ್ ಹಾಗೂ ಉತ್ತರ ಅಟ್ಲಾಂಟಿಕ್‌ನಲ್ಲಿರುವ ಭೌಗೋಳಿಕ, ಸಾಂಸ್ಕೃತಿಕ ಭಾವನೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಪ್ರಸ್ತುತ ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ದೇಶಗಳು ಸಾರ್ವಭೌಮ ರಾಜ್ಯಗಳನ್ನು ಹೊಂದಿವೆ ಎಂದು ತಿಳಿಸಲಾಗಿದೆ.