Job Description: * ಪಶ್ಚಿಮ ಮಹಾರಾಷ್ಟ್ರದ ಸತಾರಾದ ಪ್ರಿಯಾಂಕಾ ಮೋಹಿತೆ ಅವರು ಇತ್ತೀಚಿಗೆ ಕಾಂಚನ್ಜುಂಗಾ ಪರ್ವತವನ್ನು ಏರಿದ ಬಳಿಕ 8,000 ಮೀ. ಗಿಂತಲೂ ಹೆಚ್ಚಿನ ಎತ್ತರದ '05' ಶಿಖರಗಳನ್ನು ಏರಿದ ಭಾರತೀಯ ಮೊದಲ ಮಹಿಳೆ ಇವರಾಗಿದ್ದಾರೆ. * 2020 ರ ತೇನ್ಸಿಂಗ್ ನಾರ್ಗೆ ಅಡ್ವೆಂಚರ್ ಅವಾರ್ಡ್ ವಿಜೇತೆ ಪ್ರಿಯಾಂಕಾ ಮೋಹಿತೆ ಅವರು ಭೂಮಿಯ 3ನೇ ಅತೀ ಎತ್ತರದ ಪರ್ವತವಾಗಿರುವ ಕಾಂಚನಜುಂಗಾ (8,586 ಮೀ) ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ, ಈ ಮಾಹಿತಿಯನ್ನು ಅವರ ಸಹೋದರ ಆಕಾಶ್ ಮೋಹಿತೆ ಅವರು ನೀಡಿದ್ದಾರೆ. 2021 ರ ಏಪ್ರಿಲ್'ನಲ್ಲಿ ಇವರು ವಿಶ್ವದ 10ನೇ ಅತಿ ಎತ್ತರದ ಪರ್ವತ ಶಿಖರವಾಗಿರುವ ಮೌಂಟ್ ಅನ್ನಪೂರ್ಣ (8,091 ಮೀ)ನ್ನು ಯಶಸ್ವಿಯಾಗಿ ಏರಿದ್ದರು. * ಈ ಹಿಂದೆ 2013 ರಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ (8,849 ಮೀ) ಹಾಗೂ 2018 ರಲ್ಲಿ ಮೌಂಟ್ ಲೋಟ್ಸೆ (8,516 ಮೀ), ಇದರ ಜೊತೆಗೆ 8,516 ಮೀ. ಎತ್ತರದ ಮೌಂಟ್ ಮಕಾಲು, ಹಾಗೂ 8,400 ಮೀ. ಮೌಂಟ್ ಮಕಾಲು ಶಿಖರಗಳನ್ನೂ ಏರಿದ್ದಾರೆ. * ಪ್ರಿಯಾಂಕಾ ಮೋಹಿತೆ ಅವರು 2015 ರಲ್ಲಿ 6,443 ಮೀಟರ್ ಎತ್ತರದಲ್ಲಿರುವ ಮೌಂಟ್ ಮೆಂಥೋಸಾವನ್ನು ಏರಿದ್ದರು, ಇದು ಹಿಮಾಚಲ ಪ್ರದೇಶದ ಲಾಹೌಲ್ ಹಾಗೂ ಸ್ಪಿತಿ ಜಿಲ್ಲೆಯ 2 ನೇ ಅತಿ ಎತ್ತರದ ಶಿಖರವಾಗಿದೆ. ಇವರಿಗೆ 2017-18 ನೇ ಸಾಲಿನ ಸಾಹಸ ಕ್ರೀಡೆಗಳಿಗಾಗಿ ಮಹಾರಾಷ್ಟ್ರ ಸರ್ಕಾರ ನೀಡುವ ಶಿವ ಛತ್ರಪತಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.