Job Description: * ಇದೀಗ ಜಗತ್ತಿನ ಸಂಚಾರ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ವಿಚಾರಗಳು ಹೊರ ಹೊಮ್ಮುತ್ತಿವೆ. ಯುನೈಟೆಡ್‌ ಕಿಂಗ್‌ಡಮ್‌(UK)ನಲ್ಲಿ ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಫ್ಲೈಯಿಂಗ್‌ ಟ್ಯಾಕ್ಸಿ (ಹಾರುವ ಕಾರುಗಳು)ಗಳಿಗಾಗಿ ಹಾಗು ಡ್ರೋನ್‌ಗಳಿಗಾಗಿ ವಿಶೇಷವಾಗಿರುವ ನಿಲ್ದಾಣವನ್ನು ನಿರ್ಮಿಸಲಾಗಿದೆ. * UK ಯಲ್ಲಿನ ಕೊವೆಂಟ್ರಿ ಎಂಬ ನಗರದ ಸ್ಥಳೀಯ ಆಡಳಿತ ವ್ಯವಸ್ಥೆ ಹಾಗು ಏರ್‌-ಒನ್‌ (Air-One) ಎಂಬ ಸ್ಟಾರ್ಟಪ್‌ ಕಂಪನಿಗಳು ಜೊತೆಯಾಗಿ ಈ ರೀತಿಯ ಹೊಸ ಆವಿಸ್ಕಾರವನ್ನು ಅನುಷ್ಠಾನಗೊಳಿಸಿವೆ ಎಂದು ತಿಳಿದು ಬಂದಿದೆ. * UK ಯಲ್ಲಿನ ಈ ನಿಲ್ದಾಣಕ್ಕೆ "ವರ್ಟಿಪೋರ್ಟ್‌" ಎನ್ನಲಾಗುತ್ತದೆ, ಇದೀಗ ಈ ನಿಲ್ದಾಣದಲ್ಲಿ ಹಾರುವ ಕಾರುಗಳು ಹಾಗೂ ವಾಣಿಜ್ಯಿಕ ಡ್ರೋನ್‌ಗಳ ಟೇಕಾಫ್ ಅವುಗಳ ಲ್ಯಾಂಡಿಂಗ್‌ಗೆ ವ್ಯವಸ್ಥೆಯನ್ನು ಸಿದ್ದಪಡಿಸಲಾಗಿದೆ. ಈ ನಿಲ್ದಾಣದಲ್ಲಿ ಒಂದು ಕಾರು ನಿಲ್ಲಲು ಬೇಕಾಗಿರುವ ಜಾಗವನ್ನು ಹಾರುವ ಕಾರುಗಳು ಅಥವಾ ಡ್ರೋನ್‌ಗಳಿಗಾಗಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. * ಅನೇಕ ದೇಶಗಳಲ್ಲಿ ಹಾರುವ ಕಾರುಗಳ ವಾಣಿಜ್ಯಿಕ ಬಳಕೆಗೆ ಅನುಮತಿ ಲಭ್ಯವಾಗಿಲ್ಲ ಹಾಗೂ ಅದರ ಬಳಕೆಯ ಬಗ್ಗೆ ಇನ್ನು ಸಂಶೋಧನೆನಡೆಯುತ್ತಿದೆ. ಇದರ ನಡುವೆ ಕಾರು ತಯಾರಕ ಕಂಪನಿ ಹ್ಯುಂಡೈನ 'ಸೂಪರ್‌ನಾಲ್‌' (Supernal) ಎಂಬ ಸಂಸ್ಥೆ ಮುಂಬರುವ 2028 ರ ಒಳಗೆ ಒಂದು ಕುಟುಂಬದ ಸದಸ್ಯರು ಪ್ರಯಾಣ ಬೆಳೆಸಬಹುದಾದ ಹಾರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.