Job Description: * ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದೆ, ಹಾಗೂ ಅದನ್ನು ಶೇ 4.40ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಘೋಷಣೆ ಮಾಡಿದ್ದಾರೆ. ಹಾಗೂ ಇದು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ. * ಪ್ರಸ್ತುತ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದೆ, ಹಾಗೂ ಅದನ್ನು ಶೇ 4.40ಕ್ಕೆ ನಿಗದಿಪಡಿಸಲಾಗಿದೆ ಎಂದಿದ್ದಾರೆ. ಇದೀಗ ಭಾರತೀಯ ಆರ್ಥಿಕತೆಯು ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆ ಸ್ಥಿರವಾಗಿದೆ ಎಂದಿದ್ದಾರೆ. * ಇದೀಗ RBI ಬೇಡಿಕೆಯ 50 ಮೂಲಾಂಶವನ್ನು ಹೆಚ್ಚಿಸಿದೆ, ಶೇ 4.5ಕ್ಕೆ ನಿಗದಿಪಡಿಸಲಾಗಿದೆ. ಇದನ್ನು 2022ರ ಮೇ 21ರಿಂದ ಜಾರಿಗೆ ತರಲಾಗುತ್ತದೆ ಎಂದಿದ್ದಾರೆ. * ಪ್ರಸ್ತುತ ಶಕ್ತಿಕಾಂತ್ ದಾಸ್ ಅವರು ತಿಳಿಸಿರುವ ಪ್ರಕಾರ ಸರಕು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಕೊರತೆ ಹೆಚ್ಚಾಗುತ್ತಿದೆ. ಸದ್ಯ ಭಾರತವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದೆ ಎಂದಿದ್ದಾರೆ. * 2022 ರ ಮೇ. 21 ರಿಂದ '15' ದಿನಗಳಿಂದ ಜಾರಿಯಾಗುವ ನಿವ್ವಳ ಬೇಡಿಕೆ ಹಾಗೂ ಸಮಯದ ಹೊಣೆಗಾರಿಕೆಗಳಿಗಾಗಿ ನಗದು ಮೀಸಲು ಅನುಪಾತವನ್ನು (CRR) 50 ಬೇಸಿಸ್ ಪಾಯಿಂಟ್‌ಗಳಿಂದ 4.5% ಗೆ ಏರಿಸಲು ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಶಕ್ತಿಕಾಂತ್ ದಾಸ್ ಅವರು ಈ ಮಾಹಿತಿ ನೀಡಿದ್ದಾರೆ.