Job Description: * ಪ್ರಸ್ತುತ ಸುದರ್ಶನ್ ವೇಣು ಅವರನ್ನು ದ್ವಿಚಕ್ರ ವಾಹನಗಳು ಹಾಗೂ ತ್ರಿಚಕ್ರ ವಾಹನಗಳ ಪ್ರತಿಷ್ಠಿತ ತಯಾರಕ TVS ಮೋಟಾರ್ ಕಂಪನಿಯು ಇದೀಗ ತನ್ನ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ(MD) ನೇಮಕ ಮಾಡಿದೆ. * ಇದೀಗ TVS ಕಂಪನಿ ಭಾರತದ ಮುಂಚೂಣಿಯಲ್ಲಿರುವ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾಗಿದೆ, ಈ ಕಂಪನಿ ಅತೀ ಹೆಚ್ಚು ಪ್ರಶಸ್ತಿಗಳನ್ನೂ ಪಡೆದ ದ್ವಿಚಕ್ರ ವಾಹನ ಕಂಪನಿಯಾಗಿದೆ. ಸುದರ್ಶನ್‍ ವೇಣು ಅವರು ಈ ಕಂಪನಿಯ ಬೆಳವಣಿಗೆ ಕಾಣಲು ಭಾರತ ಹಾಗೂ ಏಷ್ಯಾ, ಆಫ್ರಿಕಾ ಯೂರೋಪಿನಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಾರೆ. * TVS ಮೋಟಾರ್ ಕಂಪನಿಯು ಭಾರತದ ತಮಿಳುನಾಡು ರಾಜ್ಯದ ಚೆನ್ನೈ ನಗರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಹಿಂದೆ 2018–19ರಲ್ಲಿ 20,000 ಕೋಟಿ ರೂ. ಆದಾಯದ ಮೂಲಕ ಈ ಕಂಪನಿ ಭಾರತದ 3ನೇ ಅತಿದೊಡ್ಡ ಮೋಟಾರ್‌ಸೈಕಲ್ ಕಂಪನಿಯಾಗಿದೆ. ಪ್ರಸ್ತುತ ಈ ಕಂಪನಿಯು ವಾರ್ಷಿಕ '03' ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ಹೊಂದಿದೆ. TVS ಮೋಟಾರ್ ಕಂಪನಿಯು 60 ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುವ ಮೂಲಕ ಭಾರತದಲ್ಲಿ 2ನೇ ಅತೀ ದೊಡ್ಡ ದ್ವಿಚಕ್ರ ವಾಹನ ರಫ್ತುದಾರ ಕಂಪನಿಯಾಗಿದೆ. * T. V. ಸುಂದರಂ ಅಯ್ಯಂಗಾರ್ ಅವರು ಮಧುರೈನ ಮೊದಲ ಬಸ್ ಸೇವೆಯನ್ನು ಈ ಹಿಂದೆ 1911 ರಲ್ಲಿ ಆರಂಭಿಸಿದರು ಹಾಗೂ ಸದರ್ನ್ ರೋಡ್‌ವೇಸ್ ಎಂಬ ಹೆಸರಿನಲ್ಲಿ ಟ್ರಕ್‌ ಹಾಗೂ ಬಸ್‌ಗಳ ಮೂಲಕ ಸಾರಿಗೆ ವ್ಯವಹಾರದಲ್ಲಿ TVS ನ್ನು ಸ್ಥಾಪನೆ ಮಾಡಿದರು. * ಈ ಹಿಂದೆ 1980 ರಲ್ಲಿ TVS 50 ಭಾರತದ ಮೊದಲ '02' ಆಸನಗಳ ಮೊಪೆಡ್ ಭಾರತದ ತಮಿಳುನಾಡು ರಾಜ್ಯದ ಹೊಸೂರಿನ ಕಾರ್ಖಾನೆಯಿಂದ ಹೊರಬಂದಿತು. ಜಪಾನಿನ ವಾಹನ ದೈತ್ಯ ಸುಜುಕಿ ಲಿಮಿಟೆಡ್‌ನೊಂದಿಗಿನ ತಾಂತ್ರಿಕ ಸಹಯೋಗದ ಮೂಲಕ 1987 ರಲ್ಲಿ ಸುಂದರಂ ಕ್ಲೇಟನ್ ಲಿಮಿಟೆಡ್ ಹಾಗೂ ಸುಜುಕಿ ಮೋಟಾರ್ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮಕ್ಕೆ ಕಾರಣವಾಯಿತು. ಇದರಿಂದಾಗಿ 1989 ರಲ್ಲಿ ಮೋಟಾರು ಸೈಕಲ್‌ಗಳ ವಾಣಿಜ್ಯ ಉತ್ಪಾದನೆಯು ಆರಂಭವಾಯಿತು ಎಂದು ತಿಳಿಸಿದ್ದಾರೆ.