Job Description: * ರಾಷ್ಟ್ರೀಯ ಪ್ರವೇಶ ಹಾಗು ಅರ್ಹತಾ ಪರೀಕ್ಷೆ (NEET) ವ್ಯಾಪ್ತಿಯಿಂದ ತಮಿಳುನಾಡು ರಾಜ್ಯಕ್ಕೆ ವಿನಾಯಿತಿಯನ್ನು ಕಲ್ಪಿಸುವ ಮಸೂದೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ. * ಇತ್ತೀಚಿಗೆ NEET ವಿರೋಧಿ ಮಸೂದೆಯನ್ನು ತಮಿಳುನಾಡು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಇದಕ್ಕೆ ರಾಜ್ಯಪಾಲ ಆರ್‌.ಎನ್. ರವಿ ಅವರು ಒಪ್ಪಿಗೆ ನೀಡಿ, ಆ ಮಸೂದೆಯನ್ನು ಇದೀಗ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ತಮಿಳುನಾಡು ರಾಜ್ಯ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಮಾಹಿತಿ ನೀಡಿದ್ದಾರೆ. * ಇದೀಗ ಈ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. * ಮುಖ್ಯಮಂತ್ರಿ MK ಸ್ಟಾಲಿನ್ ಅವರು ತಿಳಿಸಿರುವ ಪ್ರಕಾರ ನೀಟ್ ವಿನಾಯಿತಿಗಾಗಿ ನಮ್ಮ ರಾಜ್ಯವು ಹೋರಾಟವನ್ನು ಮುಂದುವರಿಸಬೇಕಿದೆ. ಅಷ್ಟೇ ಅಲ್ಲದೇ ಈ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲು ಕೇಂದ್ರಕ್ಕೆ ಒತ್ತಡವನ್ನು ಹೇರಬೇಕಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಜನರೆಲ್ಲರೂ ಒಟ್ಟಾಗಿ ಪ್ರಯತ್ನಗಳನ್ನು ಪಡಬೇಕಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಕಳೆದ ವರ್ಷದಲ್ಲಿ ತಮಿಳನಾಡು ರಾಜ್ಯಪಾಲರು ವಿಧಾನಸಭೆಯಲ್ಲಿ ಇತ್ಯರ್ಥವಾಗಿರುವ ಮಸೂದೆಯನ್ನು ತಿರಸ್ಕಸಿದ್ದರು, ಇದೀಗ ವಿಧಾನಸಭೆಯುಲ್ಲಿ ಡಿಎಂಕೆ ಸರ್ಕಾರವು ಇದೇ ವರ್ಷದ ಫೆಬ್ರವರಿಯಲ್ಲಿ ಈ NEET ಮಸೂದೆಯನ್ನು 2 ನೇ ಬಾರಿಗೆ ಅಂಗೀಕರಿಸಿದೆ ಹಾಗು ಈ ಮಸೂದೆಗೆ ರಾಜ್ಯಪಾಲರ ಒಪ್ಪಿಗೆಯೂ ಸಿಕ್ಕಿದೆ ಎಂದು ತಿಳಿಸಿದ್ದಾರೆ.