Job Description: * ಇತ್ತೀಚಿಗೆ ಪಂಜಾಬ್ ಹಾಗು ತಮಿಳುನಾಡು ರಾಜ್ಯಗಳ ಇಬ್ಬರು ವಿದ್ಯಾರ್ಥಿಗಳ ತಂಡವು ನಾಸಾ(NASA)-2022 ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್'ನ್ನು ಗೆದ್ದಿದ್ದಾರೆ ಎಂದು ಅಲ್ಲಿನ ಸುದ್ದಿವಾಹಿನಿ ಈ ಬಗ್ಗೆ ವರದಿ ಮಾಡಿದೆ. * ಪ್ರಸ್ತುತ ಅಮೇರಿಕದ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತವು ಇದೇ ಏಪ್ರಿಲ್. 29 ರಂದು ವರ್ಚುವಲ್ ಪ್ರಶಸ್ತಿ ಸಮಾರಂಭದಲ್ಲಿ ಈ ಘೋಷಣೆಯನ್ನು ಮಾಡಿದೆ. * ನಾಸಾ(NASA)ದ ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ನ ಸ್ಪರ್ಧೆಯಲ್ಲಿ 58 ಕಾಲೇಜುಗಳು ಹಾಗೂ 33 ಪ್ರೌಢಶಾಲೆಗಳ ಒಟ್ಟು 91 ತಂಡಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿ ತಂಡಗಳಿಗಾಗಿ ಸೌರವ್ಯೂಹದಲ್ಲಿನ ಗ್ರಹಗಳ ಕಠಿಣ ಮೇಲ್ಮೈ ಮೇಲೆ ಚಲಿಸುವ ಮಾನವ-ಚಾಲಿತ ರೋವರ್'ನ್ನು ವಿನ್ಯಾಸಗೊಳಿಸುವು, ಹಾಗೂ ಅದರ ನಿರ್ವಹಣೆಯನ್ನು ನೀಡಲಾಗಿತ್ತು. * ಈ ಸ್ಪರ್ಧೆಯಲ್ಲಿ ಪಂಜಾಬ್‌'ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರೆಸಿಡೆನ್ಸಿ ಸ್ಕೂಲ್ ಹೈಸ್ಕೂಲ್ ವಿಭಾಗದಲ್ಲಿ ಸ್ಟೆಮ್ ಎಂಗೇಜ್‌ಮೆಂಟ್ ಪ್ರಶಸ್ತಿಯನ್ನು ಜಯಿಸಿದೆ, ಹಾಗೂ ತಮಿಳುನಾಡು ರಾಜ್ಯದ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ಕಾಲೇಜು/ವಿಶ್ವವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. * ಪ್ರಸ್ತುತ NASA ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ ಭವಿಷ್ಯದ ಮಿಷನ್ ಯೋಜನೆಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ ಹಾಗೂ ಇತರ ಪ್ರಪಂಚಗಳಿಗೆ ಸಿಬ್ಬಂದಿ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಕಲ್ಪಿಸುತ್ತದೆ. * ಈ NASA ದ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ ಮಾನವ ಬಾಹ್ಯಾಕಾಶ ಪರಿಶೋಧನೆಯ ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಲು, ಎಂಜಿನಿಯರಿಂಗ್ ವಿನ್ಯಾಸ ಸವಾಲನ್ನು ಒಳಗೊಂಡಿದೆ. ವಾರ್ಷಿಕ ಈವೆಂಟ್ ಮತ್ತೊಂದು ಪ್ರಪಂಚದ ಸಿಮ್ಯುಲೇಟೆಡ್ ಮೇಲ್ಮೈಯನ್ನು ಹಾದುಹೋಗಲು ವಿನ್ಯಾಸಗೊಳಿಸಿದ ಮಾನವ-ಚಾಲಿತ ವಾಹನವನ್ನು ರಚಿಸಲು ಹಾಗೂ ಈ ಮಾರ್ಗದಲ್ಲಿ ಮಿಷನ್ ಕಾರ್ಯಗಳನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಸವಾಲನ್ನು ನೀಡುತ್ತದೆ. ಹಾಗೆಯೇ ವಿದ್ಯಾರ್ಥಿ ತಂಡಗಳು ವಿವಿಧ ಪರಿಸರದಲ್ಲಿ ರೋವರ್‌ಗಳನ್ನು ನಿರ್ವಹಿಸಲು ಸಹಾಯ ಮಾಡಿಕೊಡುವ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತವೆ, ನಿರ್ಮಿಸುವದರ ಜೊತೆಗೆ ಪರೀಕ್ಷಿಸುತ್ತವೆ ಎಂದಿದ್ದಾರೆ.