Job Description: * ಪ್ರಸ್ತುತ ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗದ ಜತೆ ಕೈಜೋಡಿಸಿರುವ 1,160 ಭಾರತೀಯರ ಯೋಧರು ಸಲ್ಲಿಸಿರುವ ಸೇವೆಗಾಗಿ ವಿಶ್ವಸಂಸ್ಥೆಯ ಪುರಸ್ಕಾರ ನೀಡಿ ಗೌರವಿಸಿದೆ. *‌ ದಕ್ಷಿಣ ಸುಡಾನ್‌ನಲ್ಲಿನ ಶಾಂತಿಪಾಲನಾ ಯೋಧರು ನಾಗರಿಕರ ರಕ್ಷಣಾ ಕಾರ್ಯ ಹಾಗೂ ಅಲ್ಲಿನ ರಸ್ತೆ ಅಭಿವೃದ್ಧಿ, ಸಂಪರ್ಕ ಹಾಗೂ ಸಂವಹನ ವ್ಯವಸ್ಥೆ ಸ್ಥಾಪನೆಯ ಜೊತೆಗೆ ಮನುಷ್ಯ ಹಾಗೂ ಪ್ರಾಣಿಗಳಿಗೆ ವೈದ್ಯಕೀಯ ನೆರವನ್ನೂ ನೀಡಿದ್ದಾರೆ ಈ ಕಾರಣಕ್ಕಾಗಿ ವಿಶ್ವಸಂಸ್ಥೆಯ ಗೌರವ ಪದಕ ಪಡೆಯಲು ಇಲ್ಲಿನ ಯೋಧರು ಅರ್ಹರಾಗಿದ್ದಾರೆ ಎಂದು ಯುಎನ್‌ಎಂಐಎಸ್‌ಎಸ್ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. * ಪ್ರಸ್ತುತ ದಕ್ಷಿಣ ಸುಡಾನ್ ನ ಅಪ್ಪರ್ ನೈಲ್ ಪ್ರಾಂತದಲ್ಲಿ ಶಾಂತಿಪಾಲನಾ ಪಡೆಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ 1,160 ಯೋಧರಿಗೆ ಅವರ ಕಾರ್ಯಗಳನ್ನು ಮೆಚ್ಚಿ ಪದಕ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. * ಈ ಪ್ರದೇಶದಲ್ಲಿ ಯೋಧರು ವೃತ್ತಿಪರ ತರಬೇತಿ ಶಿಬಿರ ಆಯೋಜಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮರಗೆಲಸ, ಕಟ್ಟಡ ನಿರ್ಮಾಣ ಕಾಮಗಾರಿ, ಮಳೆ ನೀರು ಕೊಯ್ಲು ಇನ್ನಿತರ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ, ಇದರಿಂದಾಗಿ ಇಲ್ಲಿನ ಜನರು ತಮ್ಮ ಕುಟುಂಬದ ನಿರ್ವಹಣೆ ಮಾಡಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದೆ. ಇಅದರ ಜೊತೆಗೆ ಅಲ್ಲಿನ ಬಾಲಕ ಬಾಲಕಿಯರಿಗೆ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ ಕೈಗೊಳ್ಳಲಾಗಿತ್ತು ಎಂದು ಭಾರತದ ತುಕಡಿಯ ಕಮಾಂಡರ್ ಕರ್ನಲ್ ವಿಜಯ್ ರಾವತ್ ಅವರು ಈ ಎಲ್ಲ ಮಾಹಿತಿ ನೀಡಿದ್ದಾರೆ.