Job Description: * ಪ್ರಸ್ತುತ ಕೇರಳದ ಕೊಚ್ಚಿಯಲ್ಲಿ ಪರಿಸರಕ್ಕೆ ಪೂರಕವಾಗಿ ಸರಕು ಸಾಗಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಲಜನಕ ಆಧಾರಿತ ಎಲೆಕ್ಟ್ರಿಕ್‌ ಹಡಗುಗಳನ್ನು ಸ್ಥಳೀಯವಾಗಿ ನಿರ್ಮಾಣ ಹಾಗೂ ಅಭಿವೃದ್ಧಿಪಡಿಸುವ ಕಾರ್ಯವನ್ನು ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಕೇಂದ್ರ ಬಂದರು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಕೇಂದ್ರ ಬಂದರು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಅವರು ಹಡಗುಗಳಿಗೆ ಜಲಜನಕ ಇಂಧನ ಬಳಸುವ ಬಗೆಗಿನ ಕಾರ್ಯಾಗಾರವನ್ನು ಉದ್ಘಾಟಿಸಿದ್ದಾರೆ. ಪ್ರಸ್ತುತ ಕೊಚ್ಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಭಾರತೀಯ ಸರಕಾರದ ಜೊತೆಗೂಡಿ ಎಲೆಕ್ಟಿಕ್‌ ಹಡಗುಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಿದೆ ಎಂದು ತಿಳಿಸಿದ್ದಾರೆ. * ಇದೀಗ ಭಾರತದ ಸರ್ಕಾರದ ಯೋಜನೆಯಾಗಿರುವ ಜಲಜನಕ ಆಧಾರಿಕ ಎಲೆಕ್ಟ್ರಿಕ್‌ ಹಡುಗಳ ನಿರ್ಮಾಣದ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ. ಹಾಗೆಯೇ ಈ 'ಕೊಚ್ಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಕೆಪಿಐಟಿ ಟೆಕ್ನಾಲಾಜಿಸ್‌ ಲಿಮಿಟೆಡ್‌ ಮತ್ತು ಜಲಜನಕ ಇಂಧನ ಕೋಶದಂತಹ ಸಂಸ್ಥೆಗಳ ಜೊತೆಗೆ ಪಾಲುದಾರಿಕೆಯನ್ನು ಹೊಂದಲಿದೆ ಎಂದಿದ್ದಾರೆ. * ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಭಾರತದ ಅತಿದೊಡ್ಡ ಹಡಗು ನಿರ್ಮಾಣ ಮತ್ತು ನಿರ್ವಹಣೆ ಸೌಲಭ್ಯವಾಗಿದೆ. ಇದು ಭಾರತದ ಕೇರಳ ರಾಜ್ಯದ ಕೊಚ್ಚಿ ಬಂದರು ನಗರದಲ್ಲಿರುವ ಕಡಲ ಸಂಬಂಧಿತ ಸೌಲಭ್ಯಗಳ ಒಂದು ಭಾಗವಾಗಿದೆ. * ಪ್ರಸ್ತುತ ಇದು ಭಾರತೀಯ ನೌಕಾಪಡೆಗೆ ಮೊದಲ ಸ್ವದೇಶಿ ವಿಮಾನವಾಹಕ ನೌಕೆ, INS ವಿಕ್ರಾಂತ್'ನ್ನು ನಿರ್ಮಾಣ ಮಾಡುತ್ತಿದೆ. * ಈ ಹಿಂದೆ 1972 ರಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್'ನ್ನು ಭಾರತ ಸರ್ಕಾರದ ಕಂಪನಿಯಾಗಿ ಸಂಯೋಜಿಸಲಾಗಿದೆ.