Job Description: * ವಾಯುವ್ಯ ಹಾಗೂ ಮಧ್ಯ ಭಾರತದಲ್ಲಿ ಸುಮಾರು 122 ವರ್ಷಗಳಲ್ಲೇ ಏಪ್ರಿಲ್ ತಿಂಗಳಲ್ಲಿ ಅತ್ಯಂತ ಬಿರು ಬೇಸಿಗೆಯ ತಿಂಗಳಾಗಿ ನಿರ್ಮಾಣವಾಗಿದೆ, ಸರಾಸರಿ ಗರಿಷ್ಠ ತಾಪಮಾನವು 35.9 ಹಾಗೂ 37.78 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ನೀಡಿದೆ. * ಪ್ರಸ್ತುತ ದೇಶದ ವಾಯುವ್ಯ ಹಾಗೂ ಪಶ್ಚಿಮ ಮಧ್ಯ ಭಾಗಗಳಾಗಿರುವ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಇದೇ ಮೇ ತಿಂಗಳಿನಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಅಧಿಕ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದೇಶದ ಬಹುತೇಕ ಪ್ರದೇಶದಲ್ಲಿ ಈ ಮೇ ತಿಂಗಳಿನ ರಾತ್ರಿಗಳು ಅತ್ಯಂತ ಬಿಸಿಯಿಂದ ಕೂಡಿರಲಿವೆ ಎಂದಿದ್ದಾರೆ. * ಇದೀಗ ಭಾರತದ ಸರಾಸರಿ ತಾಪಮಾನವು ಏಪ್ರಿಲ್‌ ತಿಂಗಳಿನಲ್ಲಿ 35.05 ಡಿಗ್ರಿಗಳಾಗಿತ್ತು, ಇದು ಸುಮಾರು 122 ವರ್ಷಗಳಲ್ಲೇ 4 ನೇ ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುವ ತಿಂಗಳಾಗಿತ್ತು ಎಂದು ತಿಳಿಸಿದ್ದಾರೆ. * ಇದರಂತೆಯೇ 2022 ರ ಮೇ ವೇಳೆಗೆ ದೇಶದಾದ್ಯಂತ ಸರಾಸರಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ, ಹಾಗೂ ವಾಯುವ್ಯ ಹಾಗೂ ಈಶಾನ್ಯ ಭಾರತದ ಕೆಲವು ಭಾಗಗಳು ಮತ್ತು ಆಗ್ನೇಯ ಕೆಲ ಭಾಗದಲ್ಲಿ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ. * ಭಾರತ ಹವಾಮಾನ ಇಲಾಖೆ (IMD)ಯು ಇದೊಂದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಸಂಸ್ಥೆಯಾಗಿದೆ. ಹಾಗೂ ಹವಾಮಾನ ಅವಲೋಕನಗಳು, ಹವಾಮಾನ ಮುನ್ಸೂಚನೆ ಮತ್ತು ಭೂಕಂಪ ಶಾಸ್ತ್ರದ ಪ್ರಮುಖ ಸಂಸ್ಥೆಯಾಗಿದೆ. IMD ತನ್ನ ಪ್ರಧಾನ ಕಚೇರಿಯನ್ನು ದೆಹಲಿಯಲ್ಲಿ ಹೊಂದಿದೆ. ಹಾಗೂ ಈ ಸಂಸ್ಥೆಯು ಪ್ರಾದೇಶಿಕ ಕಚೇರಿಗಳು ಚೆನ್ನೈ, ಮುಂಬೈ, ಕೋಲ್ಕತ್ತಾ, ನಾಗ್ಪುರ, ಗುವಾಹಟಿ ಹಾಗೂ ನವದೆಹಲಿಯಂತಹ ನಗರಗಳಲ್ಲಿವೆ.