Job Description: * ಪ್ರಸ್ತುತ ಕೇಂದ್ರ ಸರ್ಕಾರವು 2022-23 ರಲ್ಲಿ ಸಾರ್ವಜನಿಕ ವಲಯ ಘಟಕದ ಮೊದಲ ಕಾರ್ಯತಂತ್ರದ ಮಾರಾಟದಲ್ಲಿ ಪವನ್ ಹನ್ಸ್‌ ಸಂಸ್ಥೆಯಲ್ಲಿರುವ ಶೇ. 51 ರಷ್ಟು ಷೇರುಗಳನ್ನು ಸ್ಟಾರ್ 9 ಮೊಬಿಲಿಟಿ ಸಂಸ್ಥೆಗೆ ಮಾರಾಟ ಮಾಡಿದೆ ಎಂದು ವಿತ್ತ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ. * ಇದೀಗ ಕೇಂದ್ರ ಸರ್ಕಾರವು ಪವನ್ ಹನ್ಸ್‌ ಸಂಸ್ಥೆಯಲ್ಲಿರುವ ಶೇ.51 ರಷ್ಟು ಷೇರುಗಳನ್ನು 211.14 ಕೋಟಿ ರೂ.ಗಳ ಮೊತ್ತಕ್ಕೆ ಸ್ಟಾರ್ 9 ಮೊಬಿಲಿಟಿ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ. * ಪವನ್ ಹನ್ಸ್, ಕೇಂದ್ರ ಸರ್ಕಾರ ಹಾಗೂ ONGC ನಡುವಿನ ಜಂಟಿ ಉದ್ಯಮವಾಗಿದೆ, ಇದು ಹೆಲಿಕಾಪ್ಟರ್ ಹಾಗೂ ಏರೋ ಮೊಬಿಲಿಟಿ ಸೇವೆಗಳನ್ನು ನೀಡಲಿದೆ. ಪವನ್ ಹನ್ಸ್ ಲಿಮಿಟೆಡ್ ಈ ಹಿಂದಿನ '03' ಹಣಕಾಸು ವರ್ಷಗಳಲ್ಲಿ ನಷ್ಟವನ್ನು ಅನುಭವಿಸಿದೆ, ಪ್ರಸ್ತುತ ಈ ಕಂಪನಿಯು 42 ಹೆಲಿಕಾಪ್ಟರ್‌ಗಳನ್ನು ಹೊಂದಿದೆ. * ಈ ಸ್ಟಾರ್ 9 ಮೊಬಿಲಿಟಿಯ ಬಿಡ್‌ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದನೆ ನೀಡಿದೆ. * ಈ ಬಿಡ್ ಗಾಗಿ 07 ಸಂಸ್ಥೆಗಳು ಭಾಗವಹಿಸಿದ್ದವು. ಅದರಲ್ಲಿ ನಾಲ್ಕು ಸಂಸ್ಥೆಗಳು ಶಾರ್ಟ್-ಲಿಸ್ಟ್ ಆಗಿ. ಅವುಗಳಲ್ಲಿ '03' ಹಣಕಾಸು ಬಿಡ್‌ಗಳನ್ನು ಸಲ್ಲಿಸಿದ್ದವು. ಇವುಗಳಲ್ಲಿ Star9 ಮೊಬಿಲಿಟಿಯ ಬಿಡ್ ಬೆಲೆ 199.92 ಕೋಟಿಗಿಂತಲೂ ಅಧಿಕವಾಗಿತ್ತು ಎನ್ನಲಾಗಿದೆ. * Star9 ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ 6 ತಿಂಗಳ 4 ದಿನಗಳ ಹಳೆಯ ಖಾಸಗಿ ಕಂಪನಿಯಾಗಿದೆ, ಇದನ್ನು 2021 ರ ಅಕ್ಟೋಬರ್. 29 ರಂದು ಸಂಘಟಿಸಲಗಿದ್ದೆ. ಈ ಸಂಸ್ಥೆಯ ಕಛೇರಿಗಳು ಮುಂಬೈ, ಮಹಾರಾಷ್ಟ್ರಗಳಲ್ಲಿವೆ.