Job Description: * ಲೆಫ್ಟಿನೆಂಟ್ ಜನರಲ್ 'ಬಿಎಸ್ ರಾಜು' ಅವರು ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರಾಗಿ ನೇಮಕವಾಗಿದ್ದರೆ, ಇವರು ಇದೆ ಮೇ. 1 ರಂದು ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ. * ಇತ್ತೀಚಿಗೆ ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ, ಇವರ ಈ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ 'ಬಿ ಎಸ್ ರಾಜು' ಅವರನ್ನು ನೇಮಕ ಮಾಡಲಾಗಿದೆ. * ಈ ಮೊದಲು ಲೆಫ್ಟಿನೆಂಟ್ ಜನರಲ್ ರಾಜು ಹೆಲಿಕಾಪ್ಟರ್ ಪೈಲಟ್ ಆಗಿದ್ದರು, ಪ್ರಸ್ತುತ ಇವರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರು ಪೂರ್ವ ಲಡಾಖ್‌ನಲ್ಲಿನ ಸೇನೆಯ ಒಟ್ಟಾರೆ ಕಾರ್ಯಾಚರಣೆಯ ಸಿದ್ಧತೆಯನ್ನು ವಹಿಸಿಕೊಂಡಿದ್ದಾರೆ. * ಲೆಫ್ಟಿನೆಂಟ್ ಜನರಲ್ 'ಬಿ ಎಸ್ ರಾಜು' ಅವರು ಬಿಜಾಪುರ ಜಿಲ್ಲೆಯಲ್ಲಿನ ಸೈನಿಕ್ ಸ್ಕೂಲ್ ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. * ಲೆಫ್ಟಿನೆಂಟ್ ಜನರಲ್ 'ಬಿ ಎಸ್ ರಾಜು' UYSM, AVSM, YSM ಅವರು 1963 ರ ಅಕ್ಟೋಬರ್.19 ರಂದು ಜನಿಸಿದ್ದಾರೆ. ಇದೀಗ ಇವರು ಸೇನಾ ಸಿಬ್ಬಂದಿಯ 44 ನೇ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ರಾಜು ಅವರು ಈ ಹಿಂದೆ 2021 ರ ಫೆಬ್ರವರಿ.01 ರಿಂದ ಜಾಟ್ ರೆಜಿಮೆಂಟ್‌ನ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.