Job Description: * ಭಾರತೀಯ ವಾಯುಯಾನ ಉದ್ಯಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ, ಇಂಡಿಗೋ(IndiGo) ವಿಮಾನಯಾನ ಸಂಸ್ಥೆಯು ಸ್ಥಳೀಯ ನ್ಯಾವಿಗೇಷನ್ ಸಿಸ್ಟಮ್ GAGAN ನ್ನು ಬಳಸಿಕೊಂಡು ವಿಮಾನವನ್ನು ಇಳಿಸಿದ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಪ್ರಸ್ತುತ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಈ ಪ್ರಮುಖ ಸಾಧನೆ ಮಾಡಿರುವ ಮೊದಲ ದೇಶ ಭಾರತವಾಗಿದೆ. * ಇಂಡಿಗೋ(IndiGo) ವಿಮಾನಯಾನ ಸಂಸ್ಥೆಯು ATR -72 ವಿಮಾನವನ್ನು ಬಳಸಿ ಹಾರಾಟ ನಡೆಸಿದೆ ಹಾಗೂ GPS ನೆರವಿನ ಜಿಯೋ-ಆಗ್ಮೆಂಟೆಡ್ ನ್ಯಾವಿಗೇಷನ್ (ಗಗನ್)ನ್ನು ಬಳಕೆ ಮಾಡಿಕೊಂಡು ರಾಜಸ್ಥಾನದ ಕಿಶನ್‌ಗಡ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ. * ಗಗನ್ ಎನ್ನುವದು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಎಂದು ಇಂಡಿಗೋ ಹೇಳಿಕೆ ನೀಡಿದೆ. ಪ್ರಸ್ತುತ ವಿಮಾನವು ಲ್ಯಾಂಡಿಂಗ್‌ಗಾಗಿ ತನ್ನ ರನ್‌ವೇಯನ್ನು ಸಮೀಪಿಸುತ್ತಿರುವ ಸಂಧರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಕಲ್ಪಿಸಲು ಇದನ್ನು ಬಳಕೆ ಮಾಡಲಾಗುತ್ತದೆ. * ಪ್ರಸ್ತುತ ಈ 'ಗಗನ್' ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿನ ವಾಯುಪ್ರದೇಶವನ್ನು ಆಧುನೀಕರಿಸಲು ಸಹಾಯಕಾರಿಯಾಗಿದೆ, ಹಾಗೂ ವಿಮಾನ ವಿಳಂಬವನ್ನು ಕಡಿಮೆ ಮಾಡಲು ಸಹಾಯವಾಗಲಿದೆ ಎಂದಿದ್ದಾರೆ, ಇದರ ಜೊತೆಗೆ ಇಂಧನ ಉಳಿತಾಯ ಹಾಗೂ ವಿಮಾನ ಸುರಕ್ಷತೆಯನ್ನು ಸುಧಾರಿಸಲಿದೆ ಎಂದಿದ್ದಾರೆ. * ಇದೀಗ ಭಾರತದಲ್ಲಿ 2021 ರ ಜುಲೈ.01 ರ ನಂತರ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೆ GAGAN ಉಪಕರಣಗಳನ್ನು ಅಳವಡಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶವನ್ನು ನೀಡಿದೆ.