Job Description: * ಭಾರತೀಯ ಛಾಯಾಗ್ರಾಹಕ ದೇಬ್ದತ್ತಾ ಚಕ್ರವರ್ತಿ ಅವರು ಕಾಶ್ಮೀರದ ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿಯ ಚಿತ್ರಕ್ಕಾಗಿ 2022 ನೇ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. * ಈ ಚಿತ್ರವು ಕೆಬಾಬಿಯಾನಾ ಎಂಬ ಶೀರ್ಷಿಕೆಯದಲ್ಲಿದ, ಈ ಚಿತ್ರದಲ್ಲಿ ಮಾರಾಟಗಾರನು ಹೊಗೆ ತುಂಬಿದ ವಾತಾವರಣದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತಿದ್ದನು. * ಭಾರತೀಯ ಛಾಯಾಗ್ರಾಹಕ ದೇಬ್ದತ್ತಾ ಚಕ್ರವರ್ತಿ ಅವರು ಈ ಫೋಟೋವನ್ನು ಶ್ರೀನಗರದ ಖಯ್ಯಾಮ್ ಚೌಕ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರವು ಹಗಲಿನಲ್ಲಿ ರಸ್ತೆಯಂತೆ ಕಾಣುವ ಗಲ್ಲಿ ಮಾರ್ಗವಾಗಿದೆ, ಹಾಗೂ ಸಾಯಂಕಾಲ ಸಮಯದಲ್ಲಿ ಮಾರಾಟಗಾರರು ಅನೇಕ ಇದ್ದಿಲು ಒಲೆಗಳನ್ನು ಬಳಸುವದರಿಂದ ಈ ಪ್ರದೇಶವು ಚಟುವಟಿಕೆಯ ಕೇಂದ್ರವಾಗಿ ಬದಲಾಗುತ್ತದೆ ಹಾಗೂ ಇಲ್ಲಿ ಗ್ರಿಲ್‌ಗಳಿಂದ ಕಬಾಬ್‌ಗಳ ಸುವಾಸನೆ ಹಾಗೂ ಹೊಗೆ ಈ ಬೀದಿಯನ್ನು ಆಹಾರಪ್ರಿಯರ ತಾಣವಾಗಿ ಮಾರ್ಪಡಿಸುತ್ತದೆ ಎಂದಿದ್ದಾರೆ. * 2022 ನೇ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆಯನ್ನು ಈ ಹಿಂದೆ 2011 ರಲ್ಲಿ ಸ್ಥಾಪಿಸಲಾಗಿದೆ. ಈ ಪ್ರಶಸ್ತಿಯನ್ನು ಪ್ರಪಂಚದಾದ್ಯಂತದ ಅತ್ಯುತ್ತಮ ಆಹಾರ ಛಾಯಾಗ್ರಹಣ ಹಾಗೂ ವೀಡಿಯೊಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.