Job Description: * ಪ್ರಸ್ತುತ ಕೇಂದ್ರ ಉಕ್ಕು ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಇತ್ತೀಚಿಗೆ ಒಡಿಶಾದ ಉಕ್ಕಿನ ಕಾರ್ಖಾನೆಯಲ್ಲಿರುವ ಜಿಂದಾಲ್ ಸ್ಟೀಲ್ ಹಾಗು ಪವರ್ಸ್ (JSPL)ನ 'ರೀಬಾರ್ ಮಿಲ್‌(Rebar Mill)ʼನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ತಿಳಿಸಲಾಗಿದೆ. * ಈ ರೀಬಾರ್ ಮಿಲ್‌ 1.4 MTPA ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೀಬಾರ್ ತಯಾರಿಕೆ ಘಟಕಗಳಲ್ಲಿ ಒಂದಾಗಿದೆ. * ಸಚಿವರು ಜಿಂದಾಲ್ ಸ್ಟೀಲ್ ಹಾಗೂ ಪವರ್ ಲಿಮಿಟೆಡ್ (JSPL) ಘಟಕದಲ್ಲಿನ ಅದರ 2 MTPA ಕಲ್ಲಿದ್ದಲು ಅನಿಲೀಕರಣ ಘಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಒಡಿಶಾ ರಾಜ್ಯದಲ್ಲಿನ ಅಂಗುಲ್‌ನಲ್ಲಿರುವ JSPL ನ 6 MTPA ಸ್ಥಾವರಗಳಲ್ಲಿ ರಿಬಾರ್-ಮೇಕಿಂಗ್ ಸೌಲಭ್ಯವಿದೆ. ಇದೀಗ ಈ ಕಂಪನಿಯು ದಿನಕ್ಕೆ ಸರಿಸುಮಾರು 2,000 ಟನ್ CO2 ನ್ನು ಸಂಹ್ರಹಿಸುತ್ತಿದೆ. JSP ತನ್ನ ಅಂಗುಲ್ ಪ್ಲಾಂಟ್ ಸಾಮರ್ಥ್ಯವನ್ನು 6 MTPA ಯಿಂದ 12 MTPA ಗೆ ಹೆಚ್ಚಿಸುತ್ತಿದೆ ಹಾಗೂ ಈ ಕಂಪನಿಯು 2025 ರ ವೇಳೆಗೆ ಒಟ್ಟಾರೆಯಾಗಿ 15 MTPA ಉಕ್ಕು ತಯಾರಿಕೆ ಸಾಮರ್ಥ್ಯವನ್ನು ಸಾಧಿಸಲಿದೆ ಎಂದಿದ್ದಾರೆ. * ಪ್ರಸ್ತುತ ಮಿಗ್(MIG) ಮತ್ತು ಟಿಗ್(TIG)ವೆಲ್ಡಿಂಗ್ ಅಪ್ಲಿಕೇಶನ್‌ಗಳಿಗೆ ಜಡ ಅನಿಲವಾಗಿ Co2 ಅನಿಲವನ್ನು ಹೆಚ್ಚಿನ ರೀತಿಯಲ್ಲಿ ಬಳಕೆಮಾಡಲಾಗುತ್ತದೆ. * ಪ್ರಮುಖ ಆರ್ಥಿಕತೆಗಳನ್ನು ಬಿಟ್ಟು ಭಾರತವು ವಿಶ್ವದ 2 ನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ಒಡಿಶಾದಿಂದ ಗರಿಷ್ಠ ಪ್ರಮಾಣದ ಉಕ್ಕು ಉತ್ಪಾದನೆಯಾಗಿದೆ. ಅಷ್ಟೇ ಅಲ್ಲದೇ 2030 ರ ವೇಳೆಗೆ ಭಾರತದ ಉಕ್ಕಿನ ಪ್ರಮಾಣವು ಸುಮಾರು 10% ಒಡಿಶಾದ ಅಂಗುಲ್‌ನಿಂದ JSPL ನಿಂದ ಉತ್ಪಾದಿಸಲಾಗುತ್ತದೆ ಎಂದಿದ್ದಾರೆ. ಮೂಲಸೌಕರ್ಯ ನಿರ್ಮಾಣಕ್ಕಾಗಿ ವಿವಿಧ ವಿಶೇಷಣಗಳ ಉತ್ತಮ-ಗುಣಮಟ್ಟದ TMT ರಿಬಾರ್‌ಗಳನ್ನು ಉತ್ಪಾದಿಸುವ ಮೂಲಕ, ರಿಬಾರ್ ಮಿಲ್ ಮುಂದಿನ ದಿನಗಳಲ್ಲಿ ಲಕ್ಷಗಟ್ಟಲೆ ಉದ್ಯೋಗವನ್ನು ಸೃಷ್ಟಿಸಲಿದೆ ಎಂದಿದ್ದಾರೆ.