Job Description: * ಇದೀಗ ಕೇಂದ್ರ ಸಚಿವ ಸಂಪುಟವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ʼ'ಗೆ ಸುಮಾರು 820 ಕೋಟಿ ಆರ್ಥಿಕ ನೆರವಿಗೆ ಅನುಮೋದನೆಯನ್ನು ನೀಡಿದೆ ಎನ್ನಲಾಗಿದೆ. * ಇತ್ತೀಚೆಗೆ ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್ (IPPB) ಸುಮಾರು 5 ಕೋಟಿ ಗ್ರಾಹಕರ ಗಡಿಯನ್ನ ದಾಟಿದೆ, ಇದೀಗ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಬ್ಯಾಂಕ್'ಗಳಲ್ಲಿ ಇದು ಕೂಡ ಒಂದಾಗಿದೆ ಎಂದು ತಿಳಿಸಿದ್ದಾರೆ. * ಇದೀಗ IPPB ತನ್ನ 1.36 ಲಕ್ಷ ಅಂಚೆ ಕಚೇರಿಗಳ ಮೂಲಕವೇ ಡಿಜಿಟಲ್ ಹಾಗೂ ಕಾಗದರಹಿತ ರೀತಿಯಲ್ಲಿ ಸುಮಾರು '05' ಕೋಟಿ ಖಾತೆಗಳನ್ನು ಆರಂಭಿಸಿದೆ, ಅವುಗಳಲ್ಲಿ 1.20 ಲಕ್ಷವು ಸುಮಾರು 1.47 ಲಕ್ಷ ಜನರ ಮನೆ ಬಾಗಿಲಿಗೆ ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಪೂರೈಕೆ ಮಾಡುತ್ತಿದೆ. * IPPB ಹೊಂದಿರುವ ಎಲ್ಲ ಖಾತೆದಾರರಲ್ಲಿ ಸರಿ ಸುಮಾರು 48% ಮಹಿಳಾ ಖಾತೆದಾರರು, ಹಾಗೂ 52% ಪುರುಷರು ಖಾತೆದಾರರಿದ್ದಾರೆ ಎಂದು ತಿಳಿಸಿದೆ. * ಈ ಬ್ಯಾಂಕ್'ನ ಮೂಲಕ ಸುಮಾರು 98% ಮಹಿಳೆಯರ ಖಾತೆಗಳನ್ನು ಮನೆ ಬಾಗಿಲಿಗೆ ತೆರೆಯಲಾಗಿದೆ ಹಾಗೂ ಇಫಾರಿಂದಾಗಿ 68% ಕ್ಕೂ ಅಧಿಕ ಮಹಿಳೆಯರು ಡಿಬಿಟಿ ಪ್ರಯೋಜನಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಈ IPPB ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನ ಪಡೆಯಲು ಯುವಕರನ್ನ ತನ್ನೆಡೆಗೆ ಸೆಳೆಯುತ್ತಿದೆ. ಅದರಲ್ಲೂ ಸುಮಾರು 41% ಕ್ಕೂ ಅಧಿಕ ಖಾತೆದಾರರು 18 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ.