Job Description: * ದೇಶದ '07' ಮಹಿಳಾ ಸಾಧಕಿಯರ ಜೀವನಗಾಥೆಯನ್ನು ಶಾರ್ಟ್‌(ಕಿರು ಚಿತ್ರ) ಫಿಲಂ ರೂಪದಲ್ಲಿ ನಿರ್ಮಿಸಲಾಗಿದೆ, ಇದೀಗ ಈ ಕಿರು ಚಿತ್ರಗಳನ್ನು ಭಾರತೀಯ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಸಹಕಾರದೊಂದಿಗೆ ನೆಟ್‌ಫ್ಲಿಕ್ಸ್‌ ನಲ್ಲಿ ಬಿಡುಗಡೆ ಮಾಡಲಾಗಿದೆ. * ಈ ಕಿರು ಚಿತ್ರಗಳನ್ನೂ ಸಚಿವ ಅನುರಾಗ್‌ ಠಾಕೂರ್‌ ಅವರು 'ಸೆವೆನ್‌ ಚೇಂಜ್‌ಮೇಕರ್‌' ಕಿರು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ, ಈ ಚಿತ್ರಗಳ ಮೂಲಕ ನೆಟ್‌ಫ್ಲಿಕ್ಸ್‌ನ ಜೊತೆಗೆ ಸರ್ಕಾರದ ಒಪ್ಪಂದಕ್ಕೂ ಚಾಲನೆ ಸಿಕ್ಕಂತಾಗಿದೆ. * ಪ್ರಸ್ತುತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಈ ನೆಟ್‌ಫ್ಲಿಕ್ಸ್‌ನಲ್ಲಿ ಅನೇಕ ಕಿರು ಚಿತ್ರಗಳು ಬಿಡುಗಡೆಯಗಳಿವೆ ಎಂದು ತಿಳಿಸಿದ್ದಾರೆ. * 'ನೆಟ್‌ಫ್ಲಿಕ್ಸ್‌ 2 ನಿಮಿಷಗಳ 25-30 ಕಿರು ಚಿತ್ರಗಳನ್ನು ನಿರ್ಮಿಸಲಿದೆ. ಈ ಎಲ್ಲ ಚಿತ್ರಗಳನ್ನು ದೂರದರ್ಶನ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. * Netflix Inc. ಇದೊಂದು ಅಮೇರಿಕನ್ ಚಂದಾದಾರಿಕೆ ಸ್ಟ್ರೀಮಿಂಗ್ ಸೇವೆ ಕಂಪನಿಯಾಗಿದೆ. ಇದನ್ನು 1997 ರ ಆಗಸ್ಟ್. 29 ರಂದು ಆರಂಭಿಸಲಾಗಿದೆ. ಇದು ವಿತರಣಾ ವ್ಯವಹಾರಗಳ ಮೂಲಕ ಚಲನಚಿತ್ರ ಹಾಗೂ ದೂರದರ್ಶನ ಸರಣಿಯ ಗ್ರಂಥಾಲಯವನ್ನು ನೀಡುತ್ತದೆ. * ಇದು 2022 ರ ಮಾರ್ಚ್ 31 ರಂತೆ, US ಹಾಗೂ ಕೆನಡಾದಲ್ಲಿ 74.6 ಮಿಲಿಯನ್, ಹಾಗೂ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ 74.0 ಮಿಲಿಯನ್, ಲ್ಯಾಟಿನ್ ಅಮೇರಿಕಾದಲ್ಲಿ 39.9 ಮಿಲಿಯನ್ ಮತ್ತು 32.7 ಮಿಲಿಯನ್, ಅಷ್ಟೇ ಅಲ್ಲದೇ ವಿಶ್ವಾದ್ಯಂತ 221.6 ಮಿಲಿಯನ್ ಚಂದಾದಾರರನ್ನು ಹೊಂದಿದೆ. * ಈ ಹಿಂದೆ 2007 ರಲ್ಲಿ, ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಮಾಧ್ಯಮ ಹಾಗೂ ವೀಡಿಯೊ ಆನ್ ಡಿಮ್ಯಾಂಡ್ ನ್ನು ಪರಿಚಯಿಸಿತು. ಕಂಪನಿಯು 2010 ರಲ್ಲಿ ಕೆನಡಾಕ್ಕೆ ವಿಸ್ತರಣೆಯಾಯಿತು, ನಂತರದ ದಿನಗಳಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್. ನೆಟ್‌ಫ್ಲಿಕ್ಸ್ 2013 ರಲ್ಲಿ ವಿಷಯ-ಉತ್ಪಾದನಾ ಉದ್ಯಮವನ್ನು ಪ್ರವೇಶವನ್ನು ಪಡೆದುಕೊಂಡಿತು, ಇದೀಗ ಇದು 190 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.