Job Description: * "ಕೆನ್ನೆತ್ ರಾಥ್" ಅವರು ಮಾನವ ಹಕ್ಕು ನಿಗಾ ಸಂಸ್ಥೆ 'ಹ್ಯೂಮನ್ ರೈಟ್ಸ್ ವಾಚ್'ನ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯನ್ನು ಆಗಸ್ಟ್ ಅಂತ್ಯದ ವೇಳೆಗೆ ತೊರೆಯುವದಾಗಿ ಹೇಳಿದ್ದಾರೆ. ಇವರು ಸರಿ ಸುಮಾರು 3 ದಶಕಗಳ ಕಾಲ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. * ಇದೀಗ ಇವರ ಉತ್ತರಾಧಿಕಾರಿಯನ್ನು ಮುಕ್ತನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ. ಇಲ್ಲಿಯವರೆಗೆ "ತಿರಾನಾ ಹಸನ್" ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು ಇದೀಗ ಅವರು ಹಂಗಾಮಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಸಂಸ್ಥೆಯ ವರದಿ ಮಾಡಿದೆ. * ಪ್ರಸ್ತುತ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯು ಪ್ರಪಂಚದಾದ್ಯಂತ ಗಂಭೀರ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಹಾಗೂ ಮೊಟಕುಗೊಳಿಸುವ ಕಾರ್ಯವನ್ನು ಮಾಡುತ್ತದೆ. * "ಕೆನ್ನೆತ್ ರಾಥ್" ಅವರು ತಮ್ಮ ಕಾರ್ಯಾವಧಿಯಲ್ಲಿ 50 ಕ್ಕೂ ಹೆಚ್ಚು ದೇಶಗಳಿಗೆ ತನಿಖೆ ಅಥವಾ ವಕಾಲತ್ತು ಪ್ರವಾಸವನ್ನು ಕೈಗೊಂಡಿದ್ದಾರೆ.